ನೈಜೀರಿಯಾ : ದೇಶದ ವಾಯುವ್ಯ ಭಾಗದಲ್ಲಿರುವ ನೈಜೀರಿಯಾದ ಸೊಕೊಟೊ ರಾಜ್ಯದ ಗ್ರಾಮ ಮಾರುಕಟ್ಟೆಯಲ್ಲಿ ರವಿವಾರ ನಡೆದ ಬೆಚ್ಚಿಬೀಳಿಸುವ ಘಟನೆಯಲ್ಲಿ ಸತ್ತವರ ಸಂಖ್ಯೆ ನಲ್ವತ್ತಮೂರಕ್ಕೇರಿದೆ. ಇದ್ದಕ್ಕಿದ್ದಂತೆ ಸಶಸ್ತ್ರ ದಾಳಿ ನಡೆದಿದ್ದು, ಏನು ಎತ್ತ ನೋಡುವಷ್ಟರಲ್ಲಿ ನರಮೇಧವೇ ನಡೆದು ಹೋಗಿತ್ತು.
ಗೊರೊನ್ಯೋ ಗ್ರಾಮದಲ್ಲಿ ಭಾನುವಾರ ದರೋಡೆಕೋರರು ನಡೆಸಿದ ದಾಳಿಯ ನಂತರ 43 ಜನರು ಸತ್ತಿರುವುದು ದೃಢಪಟ್ಟಿದೆ’ ಎಂದು ಸೊಕೊಟೊ ಸರ್ಕಾರದ ವಕ್ತಾರ ಮುಹಮ್ಮದ್ ಬೆಲ್ಲೊ ಅವರು ಎಎಫ್ ಪಿ ಹೇಳಿದ್ದಾರೆ.
ನೈಜಿರಿಯಾದಲ್ಲಿ ಈ ಹಿಂದೆ ಸೋಮವಾರ, ಸ್ಥಳೀಯ ಪ್ರೀಮಿಯಂ ಟೈಮ್ಸ್ ಪತ್ರಿಕೆಯು ಮಾರುಕಟ್ಟೆಯಲ್ಲಿ ಸಶಸ್ತ್ರ ದಾಳಿ ನಡೆದಿತ್ತು. ಅದರಲ್ಲಿ 30ಕ್ಕೂ ಹೆಚ್ಚು ಜನರು ಸತ್ತಿದ್ದು, ಮತ್ತು 20ಜನರು ಗಾಯಗೊಂಡಿದ್ದರು. ಅಕ್ಟೋಬರ್ 8 ರಂದು, ನೈಜರ್ ನೊಂದಿಗೆ ನೈಜೀರಿಯಾದ ಗಡಿಯ ಬಳಿಯ ಹಳ್ಳಿಯಲ್ಲಿ ಮತ್ತೊಂದು ಹಳ್ಳಿಯ ಮಾರುಕಟ್ಟೆಯ ಮೇಲೆ ದರೋಡೆಕೋರರು ದಾಳಿ ನಡೆಸಿ 19 ಜನರನ್ನು ಕೊಂದಿದ್ದರು.
ದಾಳಿ ಸರಣಿ ಮುಂದುವರಿದಿದ್ದು, ಅಕ್ಟೋಬರ್ 16 ರಂದು ಭಾನುವಾರ ಸುಮಾರು 200 ಗ್ಯಾಂಗ್ ಸದಸ್ಯರು ಮೋಟಾರ್ ಸೈಕಲ್ ಗಳಲ್ಲಿ ಮಾರುಕಟ್ಟೆಗೆ ನುಗ್ಗಿ ಜನರ ಗುಂಡು ಹಾರಿಸಿದ್ದಾರೆ.