Home ಟಾಪ್ ಸುದ್ದಿಗಳು ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ 3 ಮಕ್ಳಳ ಶವಗಳು ಪತ್ತೆ: ಪ್ರಕರಣ ದಾಖಲಿಸಿದ ಆಯೋಗ

ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ 3 ಮಕ್ಳಳ ಶವಗಳು ಪತ್ತೆ: ಪ್ರಕರಣ ದಾಖಲಿಸಿದ ಆಯೋಗ

ವಿಜಯಪುರ: ನಗರದಲ್ಲಿ ನಾಪತ್ತೆಯಾಗಿದ್ದ ಮೂವರು ಮಕ್ಕಳು ಒಳಚರಂಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದಲ್ಲಿ ಶವವಾಗಿ ಪತ್ತೆಯಾಗಿದ್ದು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದೆ.

ಭಾನುವಾರ ಮನೆಯಿಂದ ಕಾಣೆಯಾಗಿದ್ದಮೂರು ಮಕ್ಕಳು ವಿಜಯಪುರ ನಗರ ಇಂಡಿ ರಸ್ತೆ ಪ್ರದೇಶದ ಒಳಚರಂಡಿ ತ್ಯಾಗ ನೀರು ಸಂಸ್ಕರಣಾ ಘಟಕದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಗದಗ ಮೂಲದ 9 ವರ್ಷದ ಅನುಷ್ಕಾ ಅನಿಲ ದಹಿಂದೆ, 7 ವರ್ಷದ ವಿಜಯ ಅನಿಲ ದಹಿಂದೆ ಹಾಗೂ ವಿಜಯಪುರದ ಮಹೀರ ಶ್ರೀಕಾಂತ ಜಾನಮೌಳಿ ಮೃತ ಮಕ್ಕಳು.

ಭಾನುವಾರ ಬೆಳಗ್ಗೆ ಮನೆ ಮುಂದೆ ಬಂದಿದ್ದ ಒಂಟೆ ಸವಾರಿ ಮಾಡಿದ್ದ ಮಕ್ಕಳು, ನಂತರ ಒಂಟೆಗಳನ್ನು ಹುಡುಕಿಕೊಂಡು ಮನೆ ಜನರು ಹತ್ತಿರದ ಚಾಬುಕಸಾಬ್ ದರ್ಗಾ ಬಳಿ ಹೋಗಿದ್ದರು. ಅಲ್ಲಿ ಒಂಟೆಗಳು ಕಾಣದಿದ್ದಾಗ ಮನೆಗೆ ಬಾರದೇ ಮೂರೂ ಮಕ್ಕಳು ಕಾಣೆಯಾಗಿದ್ದವು.

ಮಕ್ಕಳು ಬಹಳ ಹೊತ್ತಾದರೂ ಮನೆಗೆ ಬಾರದ ಕಾರಣ ಆತಂಕಗೊಂಡ ಪೋಷಕರು ಅಕ್ಕಪಕ್ಕದ ಸಿಸಿ ಕೆಮರಾ ಪರಿಶೀಲನೆ ನಡೆಸಿದ್ದಾರೆ. ಬಳಿಕ ನಗರದ ಎಪಿಎಂಸಿ ಠಾಣೆ ಪೊಲೀಸರಿಗೆ ದೂರು ನೀಡಿದ್ದರು.

ಕುಟುಂಬಸ್ಥರು ಹಾಗೂ ಪೊಲೀಸರು ಮಕ್ಕಳಿಗಾಗಿ ಹುಡುಕಾಟ ನಡೆಸಿದಾಗ ಸೋಮವಾರ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕದ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಈ‌ ಕುರಿತು ಪತ್ರಿಕಾ ಪ್ರಕಟನೆ ಹೊರಡಿಸಿರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ, ವಿಜಯಪುರ ಜಿಲ್ಲೆಯ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮಕ್ಕಳು ಶವವಾಗಿ ಪತ್ತೆಯಾದ ಘಟನೆಯ ಕುರಿತು ವರದಿ ನೀಡಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version