Home ಟಾಪ್ ಸುದ್ದಿಗಳು ಸಿಎಂ ಆದ ಮರುದಿನವೇ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಘೋಷಿಸಿದ ಭಗವಂತ್ ಮಾನ್

ಸಿಎಂ ಆದ ಮರುದಿನವೇ ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಘೋಷಿಸಿದ ಭಗವಂತ್ ಮಾನ್

ಚಂಢೀಗರ್: ಪಂಜಾಬ್ ನ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನ, ಭಗವಂತ್ ಮಾನ್ ಅವರು ತಮ್ಮ “ವೈಯಕ್ತಿಕ ವಾಟ್ಸಾಪ್ ಸಂಖ್ಯೆ” ನಲ್ಲಿ ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಪ್ರಾರಂಭಿಸುವುದಾಗಿ ಘೋಷಿಸಿದರು.

ಮೂರು ದಿನಗಳ ಅಸೆಂಬ್ಲಿ ಅಧಿವೇಶನದ ಮೊದಲ ದಿನದಂದು ಪಂಜಾಬ್ ನ 117 ಹೊಸದಾಗಿ ಚುನಾಯಿತ ಶಾಸಕರ ಪೈಕಿ 112 ಶಾಸಕರು ಹಂಗಾಮಿ ಸ್ಪೀಕರ್ ಇಂದರ್ ಬೀರ್ ಸಿಂಗ್ ನಿಜ್ಜರ್ ಅವರಿಂದ ಪ್ರಮಾಣ ವಚನ ಸ್ವೀಕರಿಸಿದ ದಿನದಂದು ಮಾನ್ ಈ ಘೋಷಣೆ ಬಂದಿದೆ.

ಜನರು ಲಂಚ ಕೇಳುವ ಅಧಿಕಾರಿಗಳ ಆಡಿಯೋ ಮತ್ತು ವಿಡಿಯೋ ತುಣುಕುಗಳನ್ನು ಕಳುಹಿಸಬಹುದು ಮತ್ತು “ಯಾವುದೇ ಭ್ರಷ್ಟ ಅಧಿಕಾರಿಯನ್ನು ಬಿಡಲಾಗುವುದಿಲ್ಲ” ಎಂದು ಹೇಳಿದರು.

ಮಾರ್ಚ್ 23 ರಂದು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಪುಣ್ಯತಿಥಿಯಂದು ಸಹಾಯವಾಣಿಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದರು.

Join Whatsapp
Exit mobile version