Home ಕರಾವಳಿ ಮಂಗಳೂರಿನ ಗುಜ್ಜರೆಕೆರೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆ !

ಮಂಗಳೂರಿನ ಗುಜ್ಜರೆಕೆರೆಯಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಪತ್ತೆ !

ಮಂಗಳೂರು: ನಗರದ ಮಂಗಳಾದೇವಿ ಸಮೀಪದ ಗುಜ್ಜರಕೆರೆಯ ನೀರಿನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳು ಲ್ಯಾಬ್ ತಪಾಸಣೆಯಿಂದ ಪತ್ತೆಯಾಗಿದೆ.

ಸಾವಿರಾರು ವರ್ಷಗಳ ಇತಿಹಾಸವಿರುವ ಗುಜ್ಜರಕೆರೆ ಸಾಕಷ್ಟು ವರ್ಷಗಳಿಂದ ಹೂಳು ತುಂಬಿ ಅಭಿವೃದ್ಧಿ ನನೆಗುದಿಗೆ ಬಿದ್ದಿತ್ತು. ಹಲವಾರು ವರ್ಷಗಳ ಹೋರಾಟದ ಬಳಿಕ ಇತ್ತೀಚೆಗೆ ಸ್ಮಾರ್ಟ್ ಸಿಟಿ ಯೋಜನೆಯ ಮೂಲಕ ಕೆರೆ ಪುನರ್ ಅಭಿವೃದ್ಧಿಗೊಂಡಿತ್ತು. ಆದರೆ ಸಾಕಷ್ಟು ಕೋಟಿ ರೂ. ವೆಚ್ಚದಿಂದ ಗುಜ್ಜರಕೆರೆ ಅಭಿವೃದ್ಧಿಗೊಂಡರೂ, ಕೆರೆಯ ನೀರು ಮಾತ್ರ ಇನ್ನೂ ಬಳಕೆಗೆ ಯೋಗ್ಯವಾಗದೆ ಉಳಿದಿದೆ.

ಗುಜ್ಜರಕೆರೆಯ ನೀರಿನ‌ ಶುದ್ಧತೆಯ ಬಗ್ಗೆ ದೃಢೀಕರಿಸಲು ನೀರಿನ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿತ್ತು.  ಇದೀಗ ಎಪ್ರಿಲ್ ಕೊನೆಯ ವಾರದಲ್ಲಿ ಮತ್ತೆ ಫಿಶರಿಶ್ ಕಾಲೇಜಿಗೆ ಕಳುಹಿಸಿರುವ ಸ್ಯಾಂಪಲ್ ನಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಅಂಶಗಳಿರುವುದು ಪತ್ತೆಯಾಗಿದೆ. ಈ ನೀರು ಸೇವನೆಗೆ ಯೋಗ್ಯವಾಗಿಲ್ಲ ಎಂದು ವರದಿಯಲ್ಲಿ ತಿಳಿದು ಬಂದಿದೆ. ಮಂಗಳೂರು ಮನಪಾ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಶುದ್ಧೀಕರಿಸುವ ಕೆಲಸ ಆಗಬೇಕಿದೆ ಎಂದು ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯ ಕಾರ್ಯದರ್ಶಿ ನೇಮು ಕೊಟ್ಟಾರಿ ಹೇಳಿದ್ದಾರೆ.

Join Whatsapp
Exit mobile version