Home ಟಾಪ್ ಸುದ್ದಿಗಳು ಜನರ ಮಧ್ಯೆ ಬೆಂಕಿ ಹಚ್ಚುವ ಪ್ರತಾಪ ಸಿಂಹನನ್ನು ಬಂಧಿಸಿ: ದಲಿತ ಸಂಘಟನೆ ಆಗ್ರಹ

ಜನರ ಮಧ್ಯೆ ಬೆಂಕಿ ಹಚ್ಚುವ ಪ್ರತಾಪ ಸಿಂಹನನ್ನು ಬಂಧಿಸಿ: ದಲಿತ ಸಂಘಟನೆ ಆಗ್ರಹ

ಚಾಮರಾಜನಗರ: ಮಹಿಷ ದಸರಾ ವಿಚಾರವಾಗಿ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಚಾಮರಾಜನಗರ ದಲಿತ ಸಂಘಟನೆ ಮುಖಂಡರು ಆಕ್ರೋಶ ಹೊರಹಾಕಿದ್ದಾರೆ.


ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ, ಸಮಾಜದ ಶಾಂತಿ ಭಂಗ ಮಾಡುತ್ತಿರುವ ಪ್ರತಾಪ್ ಸಿಂಹರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.


ಇನ್ನು ಮಹಿಷ ದಸರಾ ಅಚರಣೆ ಬಗ್ಗೆ ಅಪಸ್ವರ ಎತ್ತದೆ ಹಾಲಿ ಸಂಸದ ಯಧುವೀರ್ ತಮ್ಮ ಘನತೆ ಉಳಿಸಿಕೊಂಡಿದ್ದಾರೆ. ಆದರೆ, ಮಾಜಿ ಸಂಸದ ಪ್ರತಾಪ್ ಸಿಂಹ ವಿವೇಚನಾರಹಿತವಾಗಿ ಮಾತನಾಡುತ್ತಿದ್ದಾರೆ. ಮಹಿಷಾಸುರ ಮೈಸೂರಿನ ಅಸ್ಮಿತೆಯ ಸಂಕೇತ ಮತ್ತು ಮೈಸೂರಿನ ಆದಿ ಪುರುಷ. ಈ ಹಿನ್ನಲೆ ಮಹಿಷ ದಸರೆ ಆಚರಣೆಗೆ ಚಾಮರಾಜನಗರ ಜಿಲ್ಲೆಯಿಂದ 5 ಸಾವಿರಕ್ಕೂ ಹೆಚ್ಚು ಮಂದಿ ತೆರಳುತ್ತೇವೆ ಎಂದು ದಲಿತ ಸಂಘಟನೆ ಒಕ್ಕೂಟದ ಮುಖಂಡರ ಹೇಳಿದ್ದಾರೆ.

ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ಕುರಿತು ಮಾತನಾಡಿದ್ದ ಪ್ರತಾಪ್​ ಸಿಂಹ, ‘ಮಹಿಷ ದಸರಾಗೆ ಚಾಮುಂಡಿಬೆಟ್ಟ ಸೂಕ್ತ ಜಾಗವಲ್ಲ, ಮಹಿಷನ ಮೇಲೆ ನಂಬಿಕೆ ಇದ್ದರೆ ನೀವು ಮನೆಯಲ್ಲೇ ಪೂಜೆ ಮಾಡಿಕೊಳ್ಳಿ. ಮಹಿಷಾಸುರ, ಕಂಸ, ರಾವಣ ಯಾರನ್ನಾದರೂ ಮನೆಯಲ್ಲಿ ಆರಾಧಿಸಿ. ಆದರೆ, ಚಾಮುಂಡಿ ಬೆಟ್ಟದಲ್ಲಿ ಭಕ್ತರು ಅವಕಾಶ ಮಾಡಿಕೊಡಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದರು.

Join Whatsapp
Exit mobile version