Home ಕರಾವಳಿ ದ.ಕ ಜಿಲ್ಲೆಗೆ ಬಂತು CNG ಬಸ್‌: ಹೇಗಿದೆ ಗೊತ್ತಾ ಅದರ ವಿಶೇಷತೆಗಳು

ದ.ಕ ಜಿಲ್ಲೆಗೆ ಬಂತು CNG ಬಸ್‌: ಹೇಗಿದೆ ಗೊತ್ತಾ ಅದರ ವಿಶೇಷತೆಗಳು

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಬಸ್ಸೊಂದಕ್ಕೆ ಇದೇ ಮೊದಲ ಬಾರಿಗೆ ಪೆಟ್ರೋಲ್‌, ಡೀಸೆಲ್‌ ಗೆ ಪರ್ಯಾಯ ಇಂಧನವಾಗಿ ಸಿಎನ್‌ ಜಿ ಬಳಕೆ ಮಾಡಲಾಗುತ್ತಿದ್ದು, ಶನಿವಾರ ಉಪ್ಪಿನಂಗಡಿಯಿಂದ ಮಂಗಳೂರಿಗೆ ಈ ಹೊಸ ಬಸ್‌ ಓಡಾಟ ಆರಂಭಿಸಿದೆ.

ಈ ಕುರಿತು ಮಾಹಿತಿ ನೀಡಿದ ಬಸ್ಸಿನ ಮಾಲಕರು, ಟಾಟಾ ಮೋಟಾರ್ಸ್‌ ಕಂಪೆನಿಯು ತಯಾರಿಸಿದ ಬಸ್‌ ಇದಾಗಿದ್ದು, ದಕ್ಷಿಣ ಕನ್ನಡದಲ್ಲಿ ಸಿಎನ್‌ ಜಿ ಆಧಾರಿತ ಮೊದಲ ಬಸ್‌ ಇದಾಗಿದೆ. ಅಲ್ಲದೆ, ಈ ಬಸ್‌ ಡೀಸೆಲ್‌ ಗಿಂತ ಕೊಂಚ ಹೆಚ್ಚು ಮೈಲೇಜ್‌ ಕೊಡುತ್ತದೆ. ಆದರೆ ಓಡಾಟ ಈಗಷ್ಟೇ ಆರಂಭಗೊಂಡಿರುವುದರಿಂದ ಮೈಲೇಜ್‌ ನ ನಿಖರತೆ ಗೊತ್ತಿಲ್ಲ. ನೋಂದಣಿ ಸೇರಿ ಈ ಬಸ್‌ ಗೆ ಸುಮಾರು 30 ಲಕ್ಷ ರೂ. ತಗಲುತ್ತಿದ್ದು, ಡೀಸೆಲ್‌ ಬಸ್‌ಗಳಿಗಿಂತ 3.5 ಲಕ್ಷ ರೂ.ಗಳಷ್ಟು ದುಬಾರಿಯಾಗಿದೆ ಎಂದು ತಿಳಿಸಿದ್ದಾರೆ.


ಬಸ್ಸಿನ ಸಿಎನ್‌ ಜಿ ಟ್ಯಾಂಕ್‌ ಸಾಮರ್ಥ್ಯ 80 ಕೆಜಿ. ಸದ್ಯ ಕೊಳ್ನಾಡು, ಕಾವೂರು, ಹೊಸಬೆಟ್ಟುಗಳಲ್ಲಿ ಮಾತ್ರ ಸಿಎನ್‌ಜಿ ಇವೆ. ಬಸ್ಸಿನ ರೂಟ್‌ ಉಪ್ಪಿನಂಗಡಿಯಿಂದ ಮಂಗಳೂರು ಆಗಿರುವುದರಿಂದ ಇಂಧನ ಮುಗಿದ ಬಳಿಕ ಮರುಪೂರಣಕ್ಕಾಗಿ ದೂರದ ಸ್ಥಳದಿಂದ ತರಬೇಕು. ಆದ್ದರಿಂದ ಪ್ರಸ್ತುತ ಬಸ್ಸಿನ ನಿರ್ವಹಣೆ ಸವಾಲಿನ ವಿಚಾರವಾಗಿದೆ ಎಂದು ಹೇಳಿದ್ದಾರೆ.

ಮೊದಲ ದಿನ ಚಾಲಕರಾಗಿ ಸಂತೋಷ್‌ ಪೂಜಾರಿ ಹಾಗೂ ನಿರ್ವಾಹಕರಾಗಿ ರಾಜೇಶ್‌ ರೈ ಅವರು ಈ ಬಸ್ಸಿನಲ್ಲಿ ಕರ್ತವ್ಯ ನಿರ್ವಹಿಸಿದ್ದು, ಸಿಎನ್‌ಜಿ ಬಸ್ಸಿನ ಓಡಾಟ ಉತ್ತಮ ಅನುಭವ ನೀಡಿದೆ ಎಂದು ತಿಳಿಸಿದ್ದಾರೆ.

Join Whatsapp
Exit mobile version