Home ಟಾಪ್ ಸುದ್ದಿಗಳು ಚೆನ್ನೈನತ್ತ ನುಗ್ಗಿ ಬರುತ್ತಿರುವ ಮಾಂಡೌಸ್ ಚಂಡಮಾರುತ

ಚೆನ್ನೈನತ್ತ ನುಗ್ಗಿ ಬರುತ್ತಿರುವ ಮಾಂಡೌಸ್ ಚಂಡಮಾರುತ

ಸಾಂದ್ರಭಿಕ ಚಿತ್ರ

ಚೆನ್ನೈ: ಮಾಂಡೌಸ್ ಚಂಡಮಾರುತವು ಸೈಕ್ಲೋನ್ ಸಹಿತ ಚೆನ್ನೈ ಮತ್ತು ತಮಿಳುನಾಡಿನತ್ತ ನುಗ್ಗಿ ಬರುತ್ತಿದೆ ಎಂದು ಚೆನ್ನೈನ ಹವಾಮಾನ ಕೇಂದ್ರವು ತಿಳಿಸಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಹಟ್ಟಿರುವ ಈ ಚಂಡಮಾರುತವು ಇಂದು ಶ್ರೀಕಾಕುಳಂ ಮತ್ತು ಪಾಂಡಿಚೇರಿಯ ನಡುವೆ ಕರಾವಳಿಗೆ ನುಗ್ಗಿ ಬಂದಿದೆ. ಮುಖ್ಯವಾಗಿ ತಮಿಳುನಾಡಿನ ಎಂಟು ಜಿಲ್ಲೆಗಳಲ್ಲಿ ಇದು ಹಾನಿ ಉಂಟು ಮಾಡಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ. ಈಗಾಗಲೇ ಭಾರೀ ಗಾಳಿ ಸಹಿತದ ಮಳೆ ಬೀಳುತ್ತಿದೆ. ಡಿಸೆಂಬರ್ 9ರ ಮುಂಜಾನೆ ಈ ಚಂಡಮಾರುತವು ಚೆನ್ನೈನಿಂದ 350 ಕಿಲೋಮೀಟರ್ ದೂರ ಕಡಲಿನಲ್ಲಿ ಆಗ್ನೇಯದಲ್ಲಿತ್ತು.

65 ಕಿಮೀ ವೇಗದಲ್ಲಿ ಬಂದ ಸೈಕ್ಲೋನ್ ಈಗ ಗಂಟೆಗೆ 85 ಕಿಲೋಮೀಟರ್ ವೇಗವನ್ನು ಪಡೆದಿದೆ. ಇಂದು ಮಧ್ಯರಾತ್ರಿ ಮಾಮಲ್ಲಪುರಂ ಬಳಿ ಸೈಕ್ಲೋನ್ ನೇರ ಕರಾವಳಿಯನ್ನು ಅಪ್ಪಳಿಸಲಿದೆ. ಪುದುವೈ, ಕಾರೈಕಲ್, ಕಾಂಚೀಪುರ, ಚೆಂಗಲ್ ಪಟ್ಟು, ವಿಲ್ಲುಪುರ, ಚೆನ್ನೈ, ಪಾಂಡಿಚೇರಿಗಳಲ್ಲಿ ಸೈಕ್ಲೋನ್ ಪ್ರತಾಪವು ಜೋರಾಗಿದ್ದರೆ ಉಳಿದ ಕಡೆ ಸುಮಾರಾಗಿರುತ್ತದೆ. ಭಾರೀ ಮಳೆ ಗಾಳಿ ಇರುತ್ತದೆ ಎಂದು ತಿಳಿಸಲಾಗಿದೆ.

ಡಿಸೆಂಬರ್ 10ರಂದು ತಮಿಳುನಾಡಿನ ಹೆಚ್ಚಿನ ಭಾಗದಲ್ಲಿ ಗಾಳಿ ಮಳೆಯಾಗುತ್ತದೆ. ನಾಳೆಯವರೆಗೆ ಈ ಸೈಕ್ಲೋನ್ ಗಾಳಿಯ ವೇಗವು ಹೆಚ್ಚುತ್ತ ಹೋಗಿ ಆಮೇಲೆ ತಗ್ಗುತ್ತದೆ ಎಂದೂ ಹೇಳಲಾಗಿದೆ.

Join Whatsapp
Exit mobile version