Home ಟಾಪ್ ಸುದ್ದಿಗಳು ಚೀನಾದಲ್ಲಿ ಜೀವಂತ ಮೀನಿಗೂ ಕೋವಿಡ್ ಪರೀಕ್ಷೆ !

ಚೀನಾದಲ್ಲಿ ಜೀವಂತ ಮೀನಿಗೂ ಕೋವಿಡ್ ಪರೀಕ್ಷೆ !

ಶಾಂಗೈ: ಕಳೆದ ಎರಡೂವರೆ ವರ್ಷಗಳಿಂದ ಜನಸಾಮಾನ್ಯರನ್ನು ಕೋವಿಡ್ ಸಾಂಕ್ರಾಮಿಕ ಕಾಡುತ್ತಿದೆ. ಈ ಎರಡೂವರೆ ವರ್ಷಗಳಲ್ಲಿ ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಗಾದವರು ಕೋಟಿಗೂ ಅಧಿಕ. ಮನುಷ್ಯನ ಹೊರತು ಪಡಿಸಿ ಪ್ರಾಣಿಗಳಿಗೂ ಸೋಂಕಿನ ಪರೀಕ್ಷೆ ನಡೆಸಿರುವ ಸುದ್ದಿಗಳು ವರದಿಯಾಗಿದ್ದವು. ಇದೀಗ ಚೀನಾದಲ್ಲಿ ಜೀವಂತ ಮೀನಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದೆ.

ಶಾಂಘೈನ ಮಾರುಕಟ್ಟೆಯಲ್ಲಿ ವೈದ್ಯಕೀಯ ಸಿಬ್ಬಂದಿಗಳು ಮೀನುಗಳ ಮೇಲೆ ಕೋವಿಡ್ -19 ಪರೀಕ್ಷೆಗಳನ್ನು ನಡೆಸುತ್ತಿರುವ ಹೊಸ ವೀಡಿಯೊ ವೈರಲ್ ಆಗಿದೆ. ಸಂಪೂರ್ಣ ಪಿಪಿಇ ಧರಿಸಿದ ವೈದ್ಯಕೀಯ ಸಿಬ್ಬಂದಿಗಳು ಜೀವಂತ ಮೀನನ್ನು ಸ್ವ್ಯಾಬ್ ಪರೀಕ್ಷೆಗೆ ಒಳಪಡಿಸುವ ವೀಡಿಯೋವೊಂದು ಸದ್ಯ ವೈರಲ್ಲಾಗಿದೆ.

ಚೀನಾದಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆಗಳು ವಿಪರೀತ ಹೆಚ್ಚಳವಾಗುತ್ತಿದ್ದು ಕೆಲವು ನಗರಗಳಲ್ಲಿ ಚೀನಾ ಸರಕಾರ ಲಾಕ್ ಡೌನ್ ಘೋಷಿಸಿದೆ.

ನಮ್ಮ ಯೂಟ್ಯೂಬ್ ಚಾನೆಲನ್ನು Subscribe ಮಾಡಿ : Prasthutha News

Join Whatsapp
Exit mobile version