Home ಟಾಪ್ ಸುದ್ದಿಗಳು ಚಂಡೀಗಡ್ ಕೂಡಲೇ ಪಂಜಾಬಿಗೆ ವರ್ಗಾವಣೆಯಾಗಲಿ: ವಿಧಾನಸಭೆಯಲ್ಲಿ ಒತ್ತಾಯಿಸುವ ತೀರ್ಮಾನ ಮಂಡಿಸಿದ ಭಗವಂತ್ ಮಾನ್

ಚಂಡೀಗಡ್ ಕೂಡಲೇ ಪಂಜಾಬಿಗೆ ವರ್ಗಾವಣೆಯಾಗಲಿ: ವಿಧಾನಸಭೆಯಲ್ಲಿ ಒತ್ತಾಯಿಸುವ ತೀರ್ಮಾನ ಮಂಡಿಸಿದ ಭಗವಂತ್ ಮಾನ್

ಪಂಜಾಬ್: ಚಂಡೀಗಡವು ಕೇಂದ್ರಾಡಳಿತ ಪ್ರದೇಶವಾದುದರಿಂದ ಅಲ್ಲಿ ಕೇಂದ್ರ ಸರಕಾರದ ನಿಯಮಾವಳಿಗಳು ಪಾಲನೆಯಾಗಬೇಕು ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿದ ಮರುದಿನವೇ ಚಂಡೀಗಡವನ್ನು ಪಂಜಾಬಿಗೆ ನೀಡುವಂತೆ ಕೇಂದ್ರವನ್ನು ಒತ್ತಾಯಿಸುವ ತೀರ್ಮಾನವನ್ನು ಮುಖ್ಯಮಂತ್ರಿ ಭಗವಂತ ಮಾನ್ ಅವರು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆದರು. ಇದಕ್ಕಾಗಿಯೇ ಏಪ್ರಿಲ್ 1ರ ಶುಕ್ರವಾರ ವಿಶೇಷ ಒತ್ತಾಯದ ತೀರ್ಮಾನ ತೆಗೆದುಕೊಂಡು ಅದು ವಿಧಾನ ಸಭೆಯಲ್ಲಿ ಧ್ವನಿ ಮತದಿಂದ ಪಾಸಾಯಿತು.

ಈ ಬಗ್ಗೆ ಮಾತನಾಡಿದ ಭಗವಂತ ಮಾನ್, ಇಡೀ ರಾಜ್ಯದ ಜನರು ಈ ವಿಷಯವಾಗಿ ಒಗ್ಗಟ್ಟಿನಿಂದ ತಮ್ಮ ಹಕ್ಕುಗಳಿಗಾಗಿ ಹೋರಾಡುವರು ಎನ್ನುವ ಭರವಸೆ ನನಗೆ ಇದೆ. ಪ್ರಧಾನಿ ಮೋದಿಯೊಂದಿಗೆ ಸಮಯ ನಿಗದಿಪಡಿಸಿ ವಿಷಯದ ಕುರಿತು ಚರ್ಚಿಸಲಿದ್ದೇನೆ ಎಂದರು.

“1966ರ ಪಂಜಾಬ್ ಮರು ವಿಂಗಡಣೆ ಕಾಯ್ದೆಯಂತೆ ಪಂಜಾಬ್ ವಿಭಜನೆಯಾಗಿ ಹರಿಯಾಣ ರಾಜ್ಯ ಬೇರೆಯಾಗಿದೆ. ಆಗ ರಾಜಧಾನಿ ಚಂಡೀಗಡ ಮತ್ತು ಪಂಜಾಬಿನ ಕೆಲವು ಪ್ರದೇಶಗಳನ್ನು ಹಿಮಾಚಲ ಪ್ರದೇಶ ಕೇಂದ್ರಾಡಳಿತ ಪ್ರದೇಶಕ್ಕೆ ಸೇರಿಸಿದರು. ಹಿಮಾಚಲ ರಾಜ್ಯವಾದ ನಂತರ ಚಂಡೀಗಡ ಕೇಂದ್ರಾಡಳಿತ ಪ್ರದೇಶವಾಗಿಯೇ ಉಳಿದಿದೆ ಅಂದಿನಿಂದ ಅಲ್ಲಿನ ಆಡಳಿತದಲ್ಲಿ ಸಮತೋಲನ ಕಾಯ್ದುಕೊಳ್ಳಲು ಬಿಬಿಎಂಬಿ- ಬಾಕ್ರಾ ಬಿಯಾಸ್ ನಿರ್ವಹಣಾ ಮಂಡಳಿಯಲ್ಲಿ ಎರಡೂ ರಾಜ್ಯಗಳ ಸದಸ್ಯರಿಗೆ ಪ್ರಮಾಣ ರೀತ್ಯಾ ಅವಕಾಶ ನೀಡಲಾಗುತ್ತಿದೆ.” ಎಂದು ಮಾನ್ ವಿಧಾನ ಸಭೆಯನ್ನುದ್ದೇಶಿಸಿ ಹೇಳಿದರು.

Join Whatsapp
Exit mobile version