Home ರಾಜ್ಯ ಮದುವೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳಿಗೆ ಆದ್ಯತೆ: ಸಾಮಾಜಿಕ ಕಾಳಜಿ ಮೆರೆದ ಯಶಿಕಾ – ರೋಹಿತ್ ಜೋಡಿ

ಮದುವೆಯಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳಿಗೆ ಆದ್ಯತೆ: ಸಾಮಾಜಿಕ ಕಾಳಜಿ ಮೆರೆದ ಯಶಿಕಾ – ರೋಹಿತ್ ಜೋಡಿ

ಬೆಂಗಳೂರು: ಕೋವಿಡ್ ಸೋಂಕಿನ ನಾಲ್ಕನೇ ಅಲೆಯ ಭೀತಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರಿನ ಜೋಡಿಯೊಂದು ಕೋವಿಡ್ ಸೋಂಕು ನಿಯಂತ್ರಣ ಕುರಿತ ಜನ ಜಾಗೃತಿಯೊಂದಿಗೆ ಮದುವೆಗೆ ಸಜ್ಜಾಗಿದೆ.


ಯಶಿಕಾ ಮತ್ತು ರೋಹಿತ್ ಜೋಡಿ ದೇವನಹಳ್ಳಿ ಸಮೀಪದ ಕ್ಲಾರ್ಕ್ ಎಕ್ಸೋಟಿಕಾದಲ್ಲಿ ಬುಧವಾರ ಮದುವೆ ಮಾಡಿಕೊಳ್ಳುತ್ತಿದೆ. ಇಂದು ಸಂಜೆ ಮದುವೆ ದಿಬ್ಬಣ ಆಗಮಿಸಿದಾಗ ವಧು ವರ ಮತ್ತು ಕುಟುಂಬಸ್ಥರು ಮಾಸ್ಕಧರಿಸಿ, ಕೈಯಲ್ಲಿ ಭಿತ್ತಿ ಪತ್ರ ಹಿಡಿದ್ದರು. ಮದುವೆ ಸಮಾರಂಭದಲ್ಲಿ ಜನ ಜಾಗೃತಿ ಮೂಡಿಸುವ, ಸ್ವಚ್ಛತೆಗೆ ಆದ್ಯತೆ ನೀಡಲು ಹೆಚ್ಚು ಒತ್ತು ಕೊಡಲಾಗಿತ್ತು.


ಬ್ಯಾಂಡ್ ವಾದ್ಯ, ಸಂಗೀತದ ಹಿಮ್ಮೇಳದೊಂದಿಗೆ ಆಗಮಿಸಿದ ಜೋಡಿ, ಪ್ರತಿಯೊಬ್ಬರಲ್ಲೂ ಕೊರೋನಾ ನಿಯಂತ್ರಣ ಕ್ರಮಗಳಿಗೆ ಒತ್ತು ನೀಡುವಂತೆ ಮನವಿ ಮಾಡಿತು. ಮದುವೆ ಜೋಡಿಯ ಸಮಾಜಿಕ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ.

Join Whatsapp
Exit mobile version