Home ಟಾಪ್ ಸುದ್ದಿಗಳು ಭಾರತದಲ್ಲಿ ಇಳಿಮುಖವಾಗುತ್ತಿರುವ ಕೋವಿಡ್ ಪ್ರಕರಣ : 132 ದಿನದ ನಂತರ ಕಡಿಮೆ ಪ್ರಕರಣ ದಾಖಲು

ಭಾರತದಲ್ಲಿ ಇಳಿಮುಖವಾಗುತ್ತಿರುವ ಕೋವಿಡ್ ಪ್ರಕರಣ : 132 ದಿನದ ನಂತರ ಕಡಿಮೆ ಪ್ರಕರಣ ದಾಖಲು

ನವದೆಹಲಿ ಜುಲೈ 27: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 29,689 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ ಮತ್ತು 416 ಸಾವುಗಳು ಸಂಭವಿಸಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತನ್ನ ಹೇಳಿಕೆಯಲ್ಲಿ ತಿಳಿಸಿದೆ. 132 ದಿನಗಳ ನಂತರ ದೇಶವು ಇಂದು 30,000 ಕ್ಕಿಂತ ಕಡಿಮೆ ಪ್ರಕರಣಗಳನ್ನು ವರದಿ ಮಾಡಿದೆ.

ಆರೋಗ್ಯ ಸಚಿವಾಲಯದ ವರದಿ ಆಧಾರದಲ್ಲಿ ಭಾರತದಲ್ಲಿ ಇದೀಗ 3,98,100 ಪಾಸಿಟಿವ್ ಪ್ರಕರಣ ಚಾಲ್ತಿಯಲ್ಲಿದೆ ಮತ್ತು ಪ್ರತಿನಿತ್ಯ ಶೇಕಡಾ 1.73 ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ 42,363 ಕೋವಿಡ್ ರೋಗಿಗಳು ಚೇತರಿಕೆಯಾಗಿದ್ದಾರೆ. ಇದರೊಂದಿಗೆ ಭಾರತದಲ್ಲಿ 3,06,21,469 ಮಂದಿ ಕೋವಿಡ್ ಪ್ರಕರಣದಲ್ಲಿ ಚೇತರಿಕೆ ಕಂಡಿದ್ದಾರೆ. ಮಾತ್ರವಲ್ಲದೆ ದೇಶದಲ್ಲಿ ಇಂದು ಶೇಕಡಾ 97.39 ರಷ್ಟು ಚೇತರಿಕಾ ದರವನ್ನು ಹೊಂದಿದೆ. ಭಾರತದಲ್ಲಿ ದಾಖಲಾದ ಒಟ್ಟು ಸಾವುಗಳ ಸಂಖ್ಯೆ 4,21,382 ಎಂದು ವರದಿಯಾಗಿದೆ.

ರಾಷ್ಟ್ರವ್ಯಾಪಿ ಲಸಿಕಾ ಕಾರ್ಯಕ್ರಮದ ಅಡಿಯಲ್ಲಿ ಈವರೆಗೆ 44.19 ಕೋಟಿ ಕೋವಿಡ್ ಲಸಿಕೆಯನ್ನು ನೀಡಲಾಗಿದೆ ಮತ್ತು ಆರೋಗ್ಯ ಸಚಿವಾಲಯವು 45.91 ಕೋಟಿ ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ತಿಳಿಸಿದೆ.

Join Whatsapp
Exit mobile version