Home ಟಾಪ್ ಸುದ್ದಿಗಳು ಮಕ್ಕಳ ಮೇಲೆ ಕೋವ್ಯಾಕ್ಸ್‌ ಲಸಿಕೆ ಪ್ರಯೋಗ ಬೇಡ : ತಜ್ಞರ ಸಮಿತಿ ಆಕ್ಷೇಪ

ಮಕ್ಕಳ ಮೇಲೆ ಕೋವ್ಯಾಕ್ಸ್‌ ಲಸಿಕೆ ಪ್ರಯೋಗ ಬೇಡ : ತಜ್ಞರ ಸಮಿತಿ ಆಕ್ಷೇಪ

ನವದೆಹಲಿ : ಕೋವ್ಯಾಕ್ಸ್‌ ಕೋವಿಡ್ ಲಸಿಕೆಯನ್ನು 2-17 ವಯಸ್ಸಿನ ಮಕ್ಕಳ ಮೇಲೆ ಪ್ರಯೋಗಕ್ಕೆ ಅವಕಾಶ ನೀಡಬಾರದು ಎಂದು ಕೇಂದ್ರ ಔಷಧ ಪ್ರಾಧಿಕಾರ ತಜ್ಞರ ಸಮಿತಿ ಶಿಫಾರಸು ಮಾಡಿದೆ ಎಂದು ವರದಿಗಳು ತಿಳಿಸಿವೆ. ಈ ಬಗ್ಗೆ ಸೀರಂ ಇನ್ಸ್‌ ಟಿಟ್ಯೂಟ್‌ ಆಫ್‌ ಇಂಡಿಯಾಕ್ಕೆ ಅವಕಾಶ ನೀಡಬಾರದು ಎಂದು ಸಮಿತಿ ತಿಳಿಸಿದೆ.

ದೇಶದ 10 ಕಡೆಗಳಲ್ಲಿ 12-17 ಮತ್ತು 2-11ರ ವಯಸ್ಸಿನ ತಲಾ 460 ಮಕ್ಕಳಿಗೆ ಕೋವ್ಯಾಕ್ಸ್‌ ಲಸಿಕೆ ಪ್ರಯೋಗಕ್ಕೆ ಅನುಮತಿ ಕೋರಿ ಸೀರಂ ಇನ್ಸ್‌ ಟಿಟ್ಯೂಟ್‌ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಿದೆ.

ಅರ್ಜಿಯ ಬಗ್ಗೆ ಚರ್ಚಿಸಿರುವ ವಿಷಯ ತಜ್ಞರ ಸಮಿತಿ, ಯಾವುದೇ ದೇಶದಲ್ಲಿ ಕೋವ್ಯಾಕ್ಸ್‌ ಲಸಿಕೆಗೆ ಅನುಮೋದನೆ ನೀಡಲಾಗಿಲ್ಲ ಎಂದು ಅಭಿಪ್ರಾಯ ಪಟ್ಟಿರುವುದಾಗಿ ವರದಿಗಳು ತಿಳಿಸಿವೆ.

ಮಕ್ಕಳ ಮೇಲೆ ಲಸಿಕೆ ಪ್ರಯೋಗವನ್ನು ಪರಿಗಣಿಸಲು ಕಂಪೆನಿಯು ವಯಸ್ಕರಲ್ಲಿ ನಡೆಸುತ್ತಿರುವ ಕೋವ್ಯಾಕ್ಸ್‌ ಲಸಿಕೆಯ ಕ್ಲಿನಿಕಲ್‌ ಪ್ರಯೋಗದ ಸುರಕ್ಷತೆ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿ ಕುರಿತ ದತ್ತಾಂಶ ಸಲ್ಲಿಸಬೇಕು ಎಂದು ಶಿಫಾರಸು ಮಾಡಲಾಗಿದೆ. ಪರಿಣಿತರ ಸಮಿತಿಯ ಶಿಫಾರಸುಗಳನ್ನು ಡಿಸಿಜಿಐ ಅನುಮೋದಿಸಿರುವುದಾಗಿ ಮೂಲಗಳು ತಿಳಿಸಿವೆ.

Join Whatsapp
Exit mobile version