Home ಟಾಪ್ ಸುದ್ದಿಗಳು ಇಡಿ ಕರೆಗೆ ಸ್ಪಂದಿಸದ ಕೇಜ್ರಿವಾಲ್: ಸಮನ್ಸ್ ನೀಡಿದ ನ್ಯಾಯಾಲಯ

ಇಡಿ ಕರೆಗೆ ಸ್ಪಂದಿಸದ ಕೇಜ್ರಿವಾಲ್: ಸಮನ್ಸ್ ನೀಡಿದ ನ್ಯಾಯಾಲಯ

ನವದೆಹಲಿ: ಅಬಕಾರಿ ನೀತಿ ಹಗರಣ ಸಂಬಂಧ ವಿಚಾರಣೆಗೆ ಇಡಿ ಸಮನ್ಸ್ ನೀಡಿದರೂ ಸ್ಪಂದಿಸದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಈಗ ದೆಹಲಿ ಕೋರ್ಟ್ನಿಂದಲೇ ಸಮನ್ಸ್ ಹೋಗಿದೆ.
ಮಾರ್ಚ್ 16ಕ್ಕೆ ಕೋರ್ಟ್ ಗೆ ಹಾಜರಾಗಬೇಕೆಂದು ಸೂಚಿಸಿದೆ.


ತಾನು ಎಂಟು ಬಾರಿ ಸಮನ್ಸ್ ನೀಡಿದರೂ ಕೇಜ್ರಿವಾಲ್ ಸ್ಪಂದಿಸುತ್ತಿಲ್ಲ ಎಂದು ಜಾರಿ ನಿರ್ದೇಶನಾಲಯವು ಕೋರ್ಟ್ ನಲ್ಲಿ ದೂರು ದಾಖಲಿಸಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಈ ಸಮನ್ಸ್ ಹೊರಡಿಸಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಮಾರ್ಚ್ 16 ರಂದು ನ್ಯಾಯಾಲಯ ಮುಂದೆ ಹಾಜರಾಗುವಂತೆ ಕೇಜ್ರಿವಾಲ್ ಅವರಿಗೆ ಸೂಚಿಸಿದ್ದಾರೆ.

Join Whatsapp
Exit mobile version