Home ಟಾಪ್ ಸುದ್ದಿಗಳು ಅನಂತ್ ಕುಮಾರ್ ಹೆಗಡೆ ನೇತೃತ್ವದಲ್ಲಿ ಹಾರಿಸಿದ್ದ ಹನುಮಧ್ವಜ ತೆರವು

ಅನಂತ್ ಕುಮಾರ್ ಹೆಗಡೆ ನೇತೃತ್ವದಲ್ಲಿ ಹಾರಿಸಿದ್ದ ಹನುಮಧ್ವಜ ತೆರವು

ಭಟ್ಕಳ: ತೆಂಗಿನಗುಂಡಿ ಬಂದರಿನಲ್ಲಿ ಸೋಮವಾರ ಸಂಸದ ಅನಂತ್ ಕುಮಾರ್ ಹೆಗಡೆ ನೇತೃತ್ವದಲ್ಲಿ ಹಾರಿಸಲಾಗಿದ್ದ ಹನುಮಧ್ವಜ ಹಾಗೂ ಸಾವರ್ಕರ್ ನಾಮಫಲಕವನ್ನು ಬುಧವಾರ ಮಧ್ಯರಾತ್ರಿ ಹೆಬಳೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.


ತಾಲ್ಲೂಕಿನ ಈ ಹಿಂದೆ ಕೂಡ ಹಾಕಲಾಗಿದ್ದ ನಾಮಫಲಕವನ್ನು ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜ.28ರಂದು ಜೆ.ಸಿ.ಬಿ ಮೂಲಕ ತೆರವುಗೊಳಿಸಿದ್ದರು. ನಾಮಫಲಕ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಜ.30ರಂದು ಹೆಬಳೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ಬಂದರಿನ ಸಮೀಪ ನಾಮಫಲಕ ಅಳವಡಿಕೆಗೆ ಕಟ್ಟೆ ಪುನರ್ ನಿರ್ಮಿಸಿದ್ದರು.


ಘಟನೆಗೆ ಸಂಬಂಧಿಸಿದಂತೆ ಸಂಸದ ಅನಂತಕುಮಾರ ಹೆಗಡೆ ಸೇರಿ 21 ಜನರ ಮೇಲೆ ಮಂಗಳವಾರ ಪ್ರಕರಣ ಕೂಡ ದಾಖಲಾಗಿತ್ತು.

Join Whatsapp
Exit mobile version