Home ಟಾಪ್ ಸುದ್ದಿಗಳು ಆರ್ಥಿಕ ಸಂಕಷ್ಟ : ಊಟಕ್ಕೆ ವಿಷ ಬೆರೆಸಿ ದಂಪತಿ ಆತ್ಮಹತ್ಯೆ

ಆರ್ಥಿಕ ಸಂಕಷ್ಟ : ಊಟಕ್ಕೆ ವಿಷ ಬೆರೆಸಿ ದಂಪತಿ ಆತ್ಮಹತ್ಯೆ

ಮೈಸೂರು: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಉದಯಗಿರಿಯ ಸಾತಗಳ್ಳಿ ಲೇಔಟ್ ನಲ್ಲಿ ನಡೆದಿದೆ.

ಸಂತೋಷ (26), ಭವ್ಯ (22) ಮೃತಪಟ್ಟ ದಂಪತಿ ಎಂದು ಗುರುತಿಸಲಾಗಿದೆ.

ಕಳೆದ ಕೆಲವು ದಿನಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ದಂಪತಿ ಸಾಲಕ್ಕೆ ಹೆದರಿ ಊಟಕ್ಕೆ ವಿಷ ಬೆರೆಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Join Whatsapp
Exit mobile version