ಪಯೋಂಗ್ಯಾಂಗ್: ಉತ್ತರ ಕೊರಿಯಾ ಜಪಾನನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿರುವುದಾಗಿ ವರದಿಯಾಗಿದೆ. ವರದಿ ಮಾಡಿದೆ.
ಈ ವರ್ಷ ಪಯೋಂಗ್ಯಾಂಗ್ ನಡೆಸಿದ ಆರನೇ ಕ್ಷಿಪಣಿ ಪರೀಕ್ಷೆ ಇದಾಗಿದೆ. ಚೀನಾ ಮತ್ತು ರಷ್ಯಾವು ವಿಶ್ವಸಂಸ್ಥೆಯಲ್ಲಿ ಅಮೆರಿಕದ ಯತ್ನವನ್ನು ವಿಫಲಗೊಳಿಸಿದ ಬಳಿಕ, ಉತ್ತರ ಕೊರಿಯಾ ಮತ್ತೊಂದು ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿ ಅಮೆರಿಕಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಜಪಾನ್ನ ಯೋನ್ಹಾಪ್ ನ್ಯೂಸ್ ವರದಿ ಮಾಡಿವೆ.
ಉತ್ತರ ಕೊರಿಯಾ ಈ ಹಿಂದೆ ಸಹ ಕ್ಷಿಪಣಿಯೊಂದನ್ನು ಉಡಾವಣೆ ಮಾಡಿತ್ತು ಎಂದು ಹೇಳಲಾಗುತ್ತಿದೆ. ಕೊರಿಯಾದ ಪೂರ್ವ ಸಮುದ್ರದಲ್ಲಿರುವ ದ್ವೀಪವೊಂದನ್ನು ಗುರಿಯಾಗಿಸಿಕೊಂಡು ಕ್ಷಿಪಣಿ ಉಡಾಯಿಸಿತ್ತು. ಜಲಾಂತರ್ಗಾಮಿಯಿಂದ ಕ್ಷಿಪಣಿ ಉಡಾಯಿಸುವ ತಂತ್ರಜ್ಞಾನದ ಪರೀಕ್ಷೆ ಹಿನ್ನೆಲೆಯಲ್ಲಿ ಇತರ ರಾಷ್ಟ್ರಗಳು ಚಿಂತಿತವಾಗಿದ್ದು, ಕಳವಳ ಕೂಡಾ ವ್ಯಕ್ತಪಡಿಸಿವೆ.