Home ಟಾಪ್ ಸುದ್ದಿಗಳು ಭ್ರಷ್ಟಾಚಾರ: ಬಿಬಿಎಂಪಿ ಮಾಜಿ ಸಹಾಯಕ ಕಂದಾಯ ಅಧಿಕಾರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

ಭ್ರಷ್ಟಾಚಾರ: ಬಿಬಿಎಂಪಿ ಮಾಜಿ ಸಹಾಯಕ ಕಂದಾಯ ಅಧಿಕಾರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ

ಬೆಂಗಳೂರು: ಬಿಬಿಎಂಪಿ ಸಹಾಯಕ ಕಂದಾಯ ಅಧಿಕಾರಿಯಾಗಿದ್ದ (ARO) ಕೃಷ್ಣೇಗೌಡ ಅವರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಬೆಂಗಳೂರಿನ 23ನೇ ಹೆಚ್ಚುವರಿ ಸಿಟಿ ಸಿವಿಲ್​ ಕೋರ್ಟ್ ಆದೇಶ ಹೊರಡಿಸಿದೆ.

 2016ರ ಮೇ 11ರಂದು ಕೊತ್ತನೂರು, ಹುಳಿಮಾವು ಬಳಿ ಆಸ್ತಿ ಜಂಟಿ ಖಾತೆ ಮಾಡಿಕೊಡಲು 20,000 ರೂ. ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದರು. ಇದೀಗ ಭ್ರಷ್ಟಾಚಾರ ಸಾಬೀತಾದ ಹಿನ್ನೆಲೆಯಲ್ಲಿ 3 ವರ್ಷ ಕಠಿಣ ಜೈಲು ಶಿಕ್ಷೆ 40 ಸಾವಿರ ರೂ. ದಂಡ ವಿಧಿಸಲಾಗಿದೆ.

ಪ್ರದೀಪ್‌ ಎಂಬುವರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿದ ಎಸಿಬಿ ಪೊಲೀಸರು, ಲಂಚ ಸ್ವೀಕರಿಸುತ್ತಿದ್ದ ಕೃಷ್ಣೇಗೌಡರನ್ನು ಬಂಧಿಸಿದ್ದರು. ಕೊತ್ತನೂರು, ಹುಳಿಮಾವು ಬಳಿ ಆಸ್ತಿ ಜಂಟಿ ಖಾತೆ ಮಾಡಿಕೊಡಲು ಕೃಷ್ಣೇಗೌಡ ಅವರು 20 ಸಾವಿರ ರೂ. ಲಂಚ ಕೇಳಿದ್ದರು. ಈ ಸಂಬಂಧ ಪ್ರದೀಪ್‌ ಎಸಿಬಿಗೆ ದೂರು ನೀಡಿದ್ದರು.

Join Whatsapp
Exit mobile version