Home ಟಾಪ್ ಸುದ್ದಿಗಳು ಗೋಡ್ಸೆ ಹೆಸರಲ್ಲಿ ತೆರೆಯಲಾಗಿದ್ದ ವಿವಾದಾತ್ಮಕ ಗ್ರಂಥಾಲಯಕ್ಕೆ ಬೀಗ | ಸೆ.144 ಜಾರಿ

ಗೋಡ್ಸೆ ಹೆಸರಲ್ಲಿ ತೆರೆಯಲಾಗಿದ್ದ ವಿವಾದಾತ್ಮಕ ಗ್ರಂಥಾಲಯಕ್ಕೆ ಬೀಗ | ಸೆ.144 ಜಾರಿ

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಮಹಾತ್ಮ ಗಾಂಧೀಜಿಯವರನ್ನು ಹತ್ಯೆ ಮಾಡಿದ್ದ ನಾಥುರಾಮ್ ಗೋಡ್ಸೆ ಹೆಸರಲ್ಲಿ ತೆರೆಯಲಾಗಿದ್ದ ಗ್ರಂಥಾಲಯಕ್ಕೆ ಬೀಗ ಜಡಿಯಲಾಗಿದ್ದು, ಹಿಂದೂ ಮಹಾಸಭಾ ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಸೆ.144 ಜಾರಿ ಮಾಡಲಾಗಿದೆ.

ನಿನ್ನೆ ಮಧ್ಯಪ್ರದೇಶ ಗ್ವಾಲಿಯರ್ ನಲ್ಲಿ ನಾಥುರಾಮ್ ಗೋಡ್ಸೆ ಹೆಸರಲ್ಲಿ ಅಖಿಲ ಭಾರತೀಯ ಹಿಂದೂ ಮಹಾಸಭಾವು ಗ್ರಂಥಾಲಯ ತೆರೆದಿತ್ತು. ದೇಶದ ವಿಭಜನೆಯನ್ನು ಗೋಡ್ಸೆ ಏಕೆ ವಿರೋಧಿಸಿದರು. ಅದರ ವಿರುದ್ಧ ಏಕೆ ಪ್ರತೀಕಾರ ತೆಗೆದುಕೊಂಡರು ಎನ್ನುವುದನ್ನು ಯುವಜನತೆಗೆ ತಿಳಿಸುವ ಉದ್ದೇಶದಿಂದ ಈ ಅಧ್ಯಯನ ಕೇಂದ್ರ ತೆರೆಯಲಾಗಿದೆ ಎಂದು ಹಿಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಜೈವೀರ್ ಭಾರದ್ವಾಜ್ ಹೇಳಿದ್ದರು.

ಗೋಡ್ಸೆ ಗ್ರಂಥಾಲಯ ತೆರೆದಿರುವುದು ವಿವಾದಕ್ಕೆ ಕಾರಣವಾಗಿದ್ದು, ದೇಶಾದ್ಯಂತ ಭಾರೀ ಟೀಕೆ ವ್ಯಕ್ತವಾಗಿತ್ತು. ಹೀಗಾಗಿ ವಿಷಯಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಮುನ್ನೆಚ್ಚರಿಕೆ ಕ್ರಮವಾಗಿ ಸದ್ಯಕ್ಕೆ ಗ್ರಂಥಾಲಯವನ್ನು ಮುಚ್ಚಲು ಹಾಗೂ ಸೆ.144 ಜಾರಿ ಮಾಡಲು ಆದೇಶಿಸಿದ್ದಾರೆ.

Join Whatsapp
Exit mobile version