ಸರ್ಕಾರಿ ಬ್ಯಾಂಕುಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ವಿರೋಧಿಸಿ ಮಾರ್ಚ್ 15 ಮತ್ತು 16 ರಂದು ದೇಶಾದ್ಯಂತ ಸರ್ಕಾರಿ ಬ್ಯಾಂಕುಗಳ ಮುಷ್ಕರ ನಡೆಯಲಿದೆ. ಗ್ರಾಮೀಣ ಬ್ಯಾಂಕುಗಳು ಕೂಡ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿವೆ.
ಈ 2 ದಿನಗಳ ಮುಷ್ಕರದಲ್ಲಿ ಎಸ್‌ಬಿಐ, ಪಿಎನ್‌ಬಿ, ಸೆಂಟ್ರಲ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಸಾರ್ವಜನಿಕ ವಲಯದ ಹೆಚ್ಚಿನ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. 13ನೇ ತಾರೀಕು ಎರಡನೇ ಶನಿವಾರ, 14ಕ್ಕೆ ಭಾನುವಾರ, ಹಾಗಾಗಿ 4 ದಿನಗಳ ಕಾಲ ಬ್ಯಾಂಕ್ʼ ಸೇವೆಗಳಲ್ಲಿ ವ್ಯತ್ಯಯ ಕಂಡು ಬರಲಿದೆ.
ನೌಕರರ ಸಂಘಟನೆಗಳು ನಡೆಸಿದ ಮಾತುಕತೆ ವಿಫಲವಾದ ಹಿನ್ನೆಲೆಯಲ್ಲಿ ಮುಷ್ಕರದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.