ಬೆಂಗಳೂರು : ಇಂದಿನಿಂದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣವನ್ನು ಸೌಮೇಂದ್ರ ಮುಖರ್ಜಿ ನೇತೃತ್ವದ ಎಸ್ ಐ ಟಿ ತಂಡ ತನಿಖೆಯನ್ನು ಆರಂಭಿಸಿವೆ. ಮೊದಲ ದಿನವೇ ದಿನೇಶ್ ಕಲ್ಲಹಳ್ಳಿಗೆ ಸಿಡಿ ನೀಡಿದ ವ್ಯಕ್ತಿಯನ್ನು ಮತ್ತು ಆತನ ಜೊತೆಗಿದ್ದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಎಸ್ ಐ ಟಿ ತನಿಖೆಗೆ ಆದೇಶಿತ್ತು. ಇಂದಿನಿಂದ ತನಿಖೆ ಆರಂಭಿಸಿರುವ ಎಸ್ ಐ ಟಿ ಅಧಿಕಾರಿಗಳು, ಮೊದಲ ದಿನವೇ ದಿನೇಶ್ ಕಲ್ಲಹಳ್ಳಿಗೆ ಸಿಡಿ ನೀಡಿದ ಯಶವಂತಪುರದ ವ್ಯಕ್ತಿಯನ್ನು ಮತ್ತು ಆತನ ಜೊತೆಗಿದ್ದ ಯುವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ
ತನಿಖೆಯ ನೇತೃತ್ವವನ್ನು ಸೌಮೇಂದ್ರ ಮುಖರ್ಜಿ ವಹಿಸಿದ್ದಾರೆ. ಸಂದೀಪ್ ಪಾಟೀಲ್, ಸಿಸಿಬಿ ಡಿಸಿಪಿ ರವಿಕುಮಾರ್, ಡಿಸಿಪಿ ಅನುಚೇತ್, ಎಸಿಪಿ ಧರ್ಮೆಂದ್ರ,ಇನ್ಸ್ಪೆಕ್ಟರ್ ಮಾರುತಿ,ಇನ್ಸ್ಪೆಕ್ಟರ್ ಪ್ರಶಾಂತ್ ಬಾಬು ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.