Home ಟಾಪ್ ಸುದ್ದಿಗಳು ಫೆಬ್ರವರಿ 3ರಿಂದ ಸಂವಿಧಾನ ರಕ್ಷಣಾ ಅಭಿಯಾನ: ಡಾ.ಎನ್.ಮೂರ್ತಿ

ಫೆಬ್ರವರಿ 3ರಿಂದ ಸಂವಿಧಾನ ರಕ್ಷಣಾ ಅಭಿಯಾನ: ಡಾ.ಎನ್.ಮೂರ್ತಿ

ಬೆಂಗಳೂರು: ಆರ್’ಪಿಐಬಿ ಪಕ್ಷದ ಪೆನ್ನು ಗುರುತಿನ ಚಿಹ್ನೆಯ ಅಧಿಕೃತ ಬಿಡುಗಡೆ ಸಮಾರಂಭ ಬೆಂಗಳೂರಿನ ಲಿಡ್ಕರ್ ಭವನದಲ್ಲಿ ನಡೆಯಿತು.


ಪಕ್ಷದ ಚಿಹ್ನೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಡಾ.ಎನ್.ಮೂರ್ತಿ, ಚುನಾವಣಾ ಆಯೋಗ ಉತ್ತಮ ಚಿಹ್ನೆಯನ್ನು ಪಕ್ಷಕ್ಕೆ ನೀಡಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಆರ್’ಪಿಐಬಿ ಪಕ್ಷ ರಾಜ್ಯದ ಎಲ್ಲ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಚುನಾವಣಾ ಸಂದರ್ಭದಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಎಂದರು.
ಫೆನ್ನು ಚಿಹ್ನೆ ನನ್ನ ಬದುಕಿನ ಸ್ವಾಭಿಮಾನದ ಹೋರಾಟದ ಚಿಹ್ನೆಯಾಗಿದೆ. ಆರ್ ಪಿ ಐ ಬಿ ಪಕ್ಷದ ಚಿಹ್ನೆ ಏಳು ಕಿರಣಗಳ ಬಣ್ಣವನ್ನು ಹೊಂದಿದೆ. ಪರಿಶ್ರಮ, ಪ್ರಾಮಾಣಿಕತೆ, ಪರಿವರ್ತನೆ, ಸಮಗ್ರತೆ, ಪಾರದರ್ಶಕ, ಸಮಾನತೆ, ಗುಣಮಟ್ಟ ಏಳು ಕಿರಣಗಳ ಸಾರಾಂಶವಾಗಿದೆ ಎಂದು ತಿಳಿಸಿದರು.


ಬ್ರಿಟನಿನ ಲೈಬ್ರರಿಯಲ್ಲಿ 50 ಸಾವಿರಕ್ಕೂ ಅಧಿಕ ಕೃತಿಗಳನ್ನು ಓದಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ವಿಶ್ವದ ನೂರು ವಿಶ್ವವಿದ್ಯಾಲಯಗಳು ಅಂಬೇಡ್ಕರ್ ಅವರ ಕುರಿತು ಅಧ್ಯಯನ ನಡೆಸಿವೆ. ಮುಂದಿನ ಯುಗ ಯುಗಾಂತರದಲ್ಲಿ ಅಂಬೇಡ್ಕರ್ ಬರೆದ ಸಂವಿಧಾನಕ್ಕೆ ಮಹತ್ವ ಇದೆ. ಇಂತಹ ಸಂವಿಧಾನವನ್ನು ತಿರುಚುವ ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಂವಿಧಾನ ಕುರಿತು ಅರಿವು ಮೂಡಿಸುವ ಅಭಿಯಾನವನ್ನು ಬರುವ ಫೆಬ್ರವರಿ ಮೂರರಿಂದ ಮುಂದಿನ 2024ರ ಫೆಬ್ರವರಿ ಮೂರರವರೆಗೆ ಸಂವಿಧಾನ ರಕ್ಷಣಾ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ನಾವು ಪಕ್ಷ ಕಟ್ಟಿದರೆ ನಮ್ಮ ಬಗ್ಗೆ ಹೀಯಾಳಿಸಿ ಮಾತನಾಡುತ್ತಾರೆ. ಕೇವಲ ಅಧಿಕಾರ ಹಿಡಿಯುವುದಲ್ಲ. ಇದೊಂದು ರಾಜಕೀಯ ಆಂದೋಲನ, ನಮ್ಮಿಂದ ಸಾಧ್ಯವಾಗದಿದ್ದರೆ ಮುಂದಿನ ಪೀಳಿಗೆಗೆ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.


ಅಂಬೇಡ್ಕರ್ ಹೇಳಿದ ಹಾಗೆ ನಮ್ಮ ಗುಲಾಮಗಿರಿಯನ್ನು ನಾವೇ ತೊಳೆದುಕೊಳ್ಳಬೇಕು. ನಾವು ಶಿಕ್ಷಿತರಾಗುವುದು, ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದಾಗ ವಿಮೋಚನೆ ದೊರೆಯಲಿದೆ. ಅಂಬೇಡ್ಕರ್ ಸಂವಿಧಾನ, ಸ್ವಾಭಿಮಾನದ ಬದುಕು ನೀಡಿರುವಾಗ ಗುಲಾಮಗಿರಿಗಾಗಿ, ಹಣದ ಆಮಿಷಕ್ಕಾಗಿ ಇನ್ನೊಂದು ಪಕ್ಷದ ಕಾರ್ಯಕರ್ತರಾಗಿ ದುಡಿಯುವುದು ಎಷ್ಟರ ಮಟ್ಟಿಗೆ ಸರಿ, ಬಿಜೆಪಿ ಆರ್ ಎಸ್ ಎಸ್ ಟ್ರಸ್ಟ್, ಜೆಡಿಎಸ್ ದೇವೇಗೌಡರ ಟ್ರಸ್ಟ್, ಕಾಂಗ್ರೆಸ್ ಸೋನಿಯಾ ಗಾಂಧಿ ಟ್ರಸ್ಟ್, ಆರ್ ಪಿ ಐಬಿ ನಮ್ಮ ನಿಮ್ಮ ಪಕ್ಷವಾಗಿದೆ. ಇದೊಂದು ರಾಷ್ಟ್ರೀಯ ಪಕ್ಷ ಈ ಪಕ್ಷದಲ್ಲಿ ಸೇರ್ಪಡೆಗೊಂಡು ಸಿದ್ಧಾಂತವನ್ನು ಪಾಲಿಸಿ ಅಂತಹವರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು. ಈ ಪಕ್ಷ ಎಲ್ಲ ಮೂಲ ಉತ್ತಮ ದಾಖಲೆ ಹೊಂದಿರುವ ಪಕ್ಷವಾಗಿದೆ. ಸಂವಿಧಾನ ಉಳಿಸಲು ಪ್ರಾಣವನ್ನು ಪಣಕ್ಕಿಟ್ಟು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.


ಆರ್ ಪಿಐಬಿ ಪಕ್ಷ ಹೊಸದಾಗಿದ್ದರೂ ತನ್ನದೇ ಅಸ್ತಿತ್ವವನ್ನು ಹೊಂದಿದೆ. ಈ ಪಕ್ಷಕ್ಕೆ ವಿವಿಧ ಸಂಘಟನೆಗಳು ಬೆಂಬಲ ನೀಡಲಿವೆ ಎಂದರು.

Join Whatsapp
Exit mobile version