Home ಟಾಪ್ ಸುದ್ದಿಗಳು ಮುರುಘಾ ಮಠದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿ ಮಠಾಧೀಶರ ರಕ್ಷಣೆಗೆ ಷಡ್ಯಂತ್ರ: ಅಶ್ರಫ್ ಮಾಚಾರ್

ಮುರುಘಾ ಮಠದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿ ಮಠಾಧೀಶರ ರಕ್ಷಣೆಗೆ ಷಡ್ಯಂತ್ರ: ಅಶ್ರಫ್ ಮಾಚಾರ್

ಬೆಂಗಳೂರು: ಮುರುಘಾ ಮಠದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣದ ಆರೋಪಿ ಮಠಾಧೀಶರ ರಕ್ಷಣೆಗೆ ಷಡ್ಯಂತ್ರ ನಡೆಯುತ್ತಿದೆಯೇ? ಲೈಂಗಿಕ ದೌರ್ಜನ್ಯಕ್ಕೆ ಕನ್ಯಾ ಪೊರೆ, ದೇಹದ ಗಾಯವೇ ಆಧಾರವೆ? ಇಷ್ಟು ದಿನದ ತನಿಖಾ ದಿಕ್ಕಿಗೂ, ಈಗ ಬಂದಿರುವ ವೈದ್ಯಕೀಯ ವರದಿಗೂ ಇಷ್ಟು ವ್ಯತ್ಯಾಸವಿರುವುದರ ಅರ್ಥವೇನು? ಆರಗ ಜ್ಞಾನೇಂದ್ರರವರೇ ಎಂದು ಎಸ್’ಡಿಪಿಐ ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಪ್ರಶ್ನಿಸಿದ್ದಾರೆ.


ವೈದ್ಯರು ನೀಡಿರುವ ವೈದ್ಯಕೀಯ ವರದಿಯಲ್ಲಿ ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬುದಕ್ಕೆ ವೈದ್ಯಕೀಯ ನಿಖರತೆಗಳು ಕಾಣಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿರುವ ಸಂಬಂಧ ಮಾಧ್ಯಮಗಳಲ್ಲಿ ಬಂದ ವರದಿಯನ್ನು ಟ್ವೀಟ್’ಗೆ ಲಗತ್ತಿಸಿರುವ ಅವರು, ಶಿವಮೂರ್ತಿ ಶರಣರನ್ನು ರಕ್ಷಿಸಲು ಷಡ್ಯಂತರ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.


ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರ ಮೇಲಿನ ಪೋಕ್ಸೋ (ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ವರದಿಯಲ್ಲಿ ಸಂತ್ರಸ್ತ ಬಾಲಕಿಯರ ಮೇಲೆ ಅತ್ಯಾಚಾರ ನಡೆದಿದೆ ಎಂಬುದಕ್ಕೆ ವೈದ್ಯಕೀಯ ನಿಖರತೆಗಳು ಕಾಣಿಸುತ್ತಿಲ್ಲ ಎಂದು ಉಲ್ಲೇಖಿಸಲಾಗಿದೆ. ಸಂತ್ರಸ್ತ ಬಾಲಕಿಯರಿಗೆ ತಲೆಯಿಂದ ಪಾದದವರೆಗೆ ಯಾವುದೇ ಗಾಯಗಳಾಗಿಲ್ಲ, ಬಟ್ಟೆಯಲ್ಲಿ ರಕ್ತ ಅಥವಾ ವೀರ್ಯದ ಕಲೆಗಳಾಗಲಿ ಇಲ್ಲ. ಕನ್ಯಾಪೊರೆಗೆ ಹಾನಿ ಆಗಿಲ್ಲ ಎಂದು ವರದಿಯಲ್ಲಿ ದೃಢಪಡಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

Join Whatsapp
Exit mobile version