ಲಕ್ನೋ: ಪ್ರತಿಭಟನಾ ನಿರತ ರೈತರ ಪರ ಧ್ವನಿ ಎತ್ತಿದ್ದ ವರುಣ್ ಗಾಂಧಿಯನ್ನು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುವ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಸ್ಥಳೀಯ ನಾಯಕನ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದೆ.
ಉತ್ತರಪ್ರದೇಶದ ಪ್ರಯಾಗ್ ರಾಜ್ ನ ಕಾಂಗ್ರೆಸ್ ಪಕ್ಷದ ಸ್ಥಳೀಯ ನಾಯಕ ಸೋನಿಯಾ ಗಾಂಧಿ ಮತ್ತು ವರುಣ್ ಗಾಂಧಿ ಚಿತ್ರಗಳಿರುವ ಪೋಸ್ಟರ್ ಹಂಚಿಕೊಂಡಿದ್ದು, ಅವರನ್ನು 15 ದಿನಗಳ ಕಾಲ ಪಕ್ಷದ ಎಲ್ಲಾ ಕರ್ತವ್ಯಗಳಿಂದ ಅಮಾನತುಗೊಳಿಸಲಾಗಿದೆ ಎಂದು ಕಾಂಗ್ರೆಸ್ ಘೋಷಿಸಿದೆ.
ಪ್ರಯಾಗ್ ರಾಜ್ ಸಿಟಿ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಇರ್ಷಾದ್ ಹಂಚಿಕೊಂಡ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುಸ್ವಾಗತ… “ದುಃಖದ ದಿನಗಳು ಮುಗಿಯಿತು, ಸಂತೋಷದ ದಿನಗಳು ಬರಲಿವೆ” ಎಂಬ ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ಇರ್ಷಾದ್ ಹಂಚಿಕೊಂಡಿದ್ದರು.
ಲಖಿಂಪುರ್ ಘಟನೆಯ ಬಗ್ಗೆ ವರುಣ್ ಗಾಂಧಿ ರೈತರ ಪರ ಧ್ವನಿ ಎತ್ತಿದ್ದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿಯಿಂದ ಹೊರಹಾಕಲ್ಪಟ್ಟ ನಂತರ ಇರ್ಷಾದ್ ಈ ಪೋಸ್ಟರ್ ಹಂಚಿಕೊಂಡಿದ್ದರು.