Home ಟಾಪ್ ಸುದ್ದಿಗಳು ಕಾಂಗ್ರೆಸ್ ದೆಹಲಿ ಕಚೇರಿ ಸ್ಥಳಾಂತರ, ಹೆಸರೂ ಬದಲಾವಣೆ

ಕಾಂಗ್ರೆಸ್ ದೆಹಲಿ ಕಚೇರಿ ಸ್ಥಳಾಂತರ, ಹೆಸರೂ ಬದಲಾವಣೆ

ನವದೆಹಲಿ: ಅಖಿಲ ಭಾರತ ಕಾಂಗ್ರೆಸ್​​ ಸಮಿತಿಯ (ಎಐಸಿಸಿ) ದೆಹಲಿಯ ಪ್ರಧಾನ ಕಚೇರಿಯನ್ನು 2024 ಜನವರಿ 2ನೇವಾರದಲ್ಲಿ ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಿದೆ. ಹೊಸ ಪ್ರಧಾನ ಕಚೇರಿಯ ಹೆಸರೂ ಬದಲಾಗಲಿದ್ದು, ಇಂದಿರಾ ಭವನ ಎಂದು ಕರೆಯಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಎಐಸಿಸಿ ಪ್ರಧಾನ ಕಚೇರಿಯು ನವದೆಹಲಿಯ ಅಕ್ಬರ್​​ ರಸ್ತೆ-24, ಸೌತ್ ಬ್ಲಾಕ್​ , ಮಾನ್​ ಸಿಂಗ್​ ರಸ್ತೆಯಲ್ಲಿ ಇದೆ. ಹೆಸರು ಅಖಿಲ ಭಾರತ ಕಾಂಗ್ರೆಸ್​​ ಸಮಿತಿ ಎಂದು ಇದೆ. ಈ ಕಚೇರಿಯನ್ನು ಮುಂದಿನ ದಿನಗಳಲ್ಲಿ ಸ್ಥಳಾಂತರ ಮಾಡಲಾಗುತ್ತದೆ. ಹೆಸರೂ ಇಂದಿರಾ ಭವನ ಎಂದು ಬದಲಾಗಲಿದೆ.

ಕಾಂಗ್ರೆಸ್ ಕಚೇರಿಯನ್ನು ಇಂದಿರಾ ಗಾಂಧಿಯವರು 1978 ರಲ್ಲಿ ಪ್ರಾರಂಭಿಸಿದರು. 44 ವರ್ಷಗಳಿಂದ ಈ ಕಚೇರಿ ಕಾಂಗ್ರೆಸ್‌ನ ಏಳುಬೀಳುಗಳಿಗೆ ಸಾಕ್ಷಿಯಾಗಿದೆ. ದೀನ್ ದಯಾಳ್ ಉಪಾಧ್ಯಾಯ ರಸ್ತೆಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿ ಬಳಿ ಹೊಸ ಕಾಂಗ್ರೆಸ್ ಕಚೇರಿಯನ್ನೂ ನಿರ್ಮಿಸಲಾಗುತ್ತಿದೆ. ಅಹ್ಮದ್ ಪಟೇಲ್ ಮತ್ತು ಮೋತಿಲಾಲ್ ಬೋಹ್ರಾ ಅವರ ಮೇಲ್ವಿಚಾರಣೆಯಲ್ಲಿ ಕಾಂಗ್ರೆಸ್‌ನ ಹೊಸ ಕಚೇರಿಯ ನಿರ್ಮಾಣವು ನಡೆಯಬೇಕಿತ್ತು. ಆದರೆ ಆ ಇಬ್ಬರು ನಾಯಕರು ತೀರಿಹೋದರು. ಇದರೊಂದಿಗೆ ಈ ಜವಾಬ್ದಾರಿಗಳನ್ನು ಕೆ.ಸಿ.ವೇಣುಗೋಪಾಲ್ ಅವರಿಗೆ ವಹಿಸಲಾಯಿತು. ನೂತನ ಕಾಂಗ್ರೆಸ್ ಕಚೇರಿ 6 ಮಹಡಿಗಳನ್ನು ಹೊಂದಿರುತ್ತದೆ. ಎಲ್ಲಾ ಆಧುನಿಕ ಸೌಕರ್ಯಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ನಿರ್ಮಿಸಲಾಗಿದೆ. ಬಿಜೆಪಿ ನಂತರ ಈಗ ಕಾಂಗ್ರೆಸ್ ತನ್ನ ಕಚೇರಿಯನ್ನು ಬದಲಾಯಿಸಲಿದೆ. ಇದು ಮಲ್ಲಿಕಾರ್ಜುನ ಖರ್ಗೆ ಅವರ ಅವಧಿಯಲ್ಲಿ ಆಗಲಿದೆ.

2018 ರಲ್ಲಿ, ಬಿಜೆಪಿ ತನ್ನ ಕೇಂದ್ರ ಕಚೇರಿಯನ್ನು ಹೊಸ ಕಟ್ಟಡಕ್ಕೆ ಬದಲಾಯಿಸಿತು. ಮೂರು ಅಂತಸ್ತಿನ ನೂತನ ಕಚೇರಿಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದರು. ಇದು 1.70 ಲಕ್ಷ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದರೊಂದಿಗೆ ಬಿಜೆಪಿ ತನ್ನ ಕಚೇರಿಯನ್ನು ಲುಟಿಯನ್ಸ್ ವಲಯದಿಂದ ಸ್ಥಳಾಂತರಿಸಿದ ಮೊದಲ ಪಕ್ಷವಾಯಿತು.

Join Whatsapp
Exit mobile version