ಮೈಸೂರು: ವಿಧಾನ ಪರಿಷತ್ ನ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಮಧು ಜಿ. ಮಾದೇಗೌಡ ಗೆಲುವು ಸಾಧಿಸಿದ್ದಾರೆ.
12205 ಮತಗಳ ಅಂತರದಿಂದ ಮಧು ಜಿ.ಮಾದೇಗೌಡ ಭರ್ಜರಿ ಗೆಲುವು ದಾಖಲಿಸಿದ್ದಾರೆ.
ಮಧು ಜಿ. ಮಾದೇಗೌಡ ಒಟ್ಟು ಮತಗಳು 45275 ಮತಗಳನ್ನು ಪಡೆದಿದ್ದಾರೆ. ಗೆಲುವಿಗೆ ನಿಗದಿಯಾದ 46083 ಮತಗಳ ಕೋಟವನ್ನು ತಲುಪಲು 808 ಮತಗಳ ಕೊರತೆ ಎದುರಾಗಿತ್ತು. ಇದೇ ವೇಳೆ ಮಧು ಜಿ. ಮಾದೇಗೌಡ ಪ್ರತಿಸ್ಪರ್ಧಿ ಬಿಜೆಪಿ ಮೈ. ವಿ. ರವಿಶಂಕರ್ ಎಲಿಮಿನೆಟ್ ಮಾಡಿ ಅಲ್ಲಿಂದ 808 ಪಡೆಯಲಾಯಿತು. ಆ ಮೂಲಕ ನಿಗದಿತ ಕೋಟಾ ತಲುಪಲು ಕಾಂಗ್ರೆಸ್ ಅಭ್ಯರ್ಥಿಗೆ ಸಾಧ್ಯವಾಯಿತು.
ಬಿಜೆಪಿ ಒಟ್ಟು 33878 ಮತ ಪಡೆದು ಬಿ.ಜೆಪಿಯ ಮೈ.ವಿ. ರವಿಶಂಕರ್ ಸೋಲು ಅನುಭವಿಸಿದರು. ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮು 19630 ಮತ ಪಡೆದು ಹೀನಾಯ ಸೋಲು ಕಂಡರು.