Home ಟಾಪ್ ಸುದ್ದಿಗಳು ಟ್ವಿಟರ್ ವಿರುದ್ಧ ಕಾಂಗ್ರೆಸ್ ನಿಂದ ಹ್ಯಾಶ್ ಟ್ಯಾಗ್ ಚಳವಳಿ

ಟ್ವಿಟರ್ ವಿರುದ್ಧ ಕಾಂಗ್ರೆಸ್ ನಿಂದ ಹ್ಯಾಶ್ ಟ್ಯಾಗ್ ಚಳವಳಿ

ನವದೆಹಲಿ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ನ ಪ್ರಮುಖ ಐದು ಟ್ವಿಟರ್ ಖಾತೆಗಳನ್ನು ಬ್ಲಾಕ್ ಮಾಡಿದ ಬೆನ್ನಿಗೆ ಕಾಂಗ್ರೆಸ್ನವರು ಟ್ವಿಟರ್ ವಿರುದ್ಧ ಹ್ಯಾಶ್ ಟ್ಯಾಗ್ ಚಳವಳಿ ನಡೆಸಿದ್ದು ಅದೀಗ ವೈರಲ್ ಆಗಿ ಟ್ವಿಟರನ್ನು ಕಂಗೆಡಿಸಿದೆ.


ಹೆಚ್ಚಿನ ಕಾಂಗ್ರೆಸ್ನವರು ತಮ್ಮ ಟ್ವಿಟರ್ ಖಾತೆಯಲ್ಲಿ ತಮ್ಮ ಪ್ರೊಫೈಲ್ಗೆ ರಾಹುಲ್ ಗಾಂಧಿಯವರ ಫೋಟೋ ಹಾಕಿ ಹೋರಾಟ ತಡೆಯಲಾಗದು ಎಂದು ಬರೆದಿದ್ದಾರೆ. ಅಷ್ಟೇ ಅಲ್ಲ ಮತ್ತೆ ಕೆಲವರು ತಮ್ಮ ಹೆಸರಿನ ಜಾಗದಲ್ಲಿ ರಾಹುಲ್ ಗಾಂಧಿಯವರ ಹೆಸರು ಮತ್ತು ಫೋಟೋ ಹಾಕಿ ಪೋಸ್ಟ್ ಮಾಡಿದ್ದರಿಂದ ಟ್ವಿಟರ್ ನಿರ್ವಾಹಕರು ಕಂಗಾಲಾಗಿದ್ದಾರೆ.

Join Whatsapp
Exit mobile version