Home ಟಾಪ್ ಸುದ್ದಿಗಳು ಕಾಲೇಜು ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ ಅಲಿಗಢದ ಪ್ರೊಫೆಸರರಿಗೆ ಕಡ್ಡಾಯ ರಜೆ

ಕಾಲೇಜು ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ ಅಲಿಗಢದ ಪ್ರೊಫೆಸರರಿಗೆ ಕಡ್ಡಾಯ ರಜೆ

ಬೆಂಗಳೂರು: ಪ್ರೊಫೆಸರ್ ಎಸ್. ಕೆ. ಖಾಲಿದ್ ಅವರು ಶ್ರೀ ವಾರ್ಸ್ನಿ ಕಾಲೇಜಿನ ಉದ್ಯಾನದಲ್ಲಿ ನಮಾಝ್ ಮಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ.

ಖಾಸಗಿ ಕಾಲೇಜಿನ ಕ್ಯಾಂಪಸ್ ನಲ್ಲಿ ನಮಾಝ್ ಮಾಡಿದ ಪ್ರೊಫೆಸರ್ ರನ್ನು ಕಡ್ಡಾಯ ರಜೆಯ ಮೇಲೆ ಕಳಿಸಲಾಗಿದ್ದು, ತನಿಖೆಗೆ ಆದೇಶ ನೀಡಲಾಗಿದೆ. ಇತ್ತೀಚೆಗೆ ಜಾಲ ತಾಣಗಳಲ್ಲಿ ಹರಿದಾಡಿದ ವೀಡಿಯೋವೊಂದರಲ್ಲಿ ಪ್ರೊ. ಎಸ್. ಕೆ. ಖಾಲಿದ್ ಅವರು ಕಾಲೇಜಿನ ಹೂದೋಟದಲ್ಲಿ ನಮಾಝ್ ಮಾಡುತ್ತಿರುವುದು ಕಂಡುಬಂದಿತ್ತು. ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಕೆಲವರು ಈ ವೀಡಿಯೋ ವಿಷಯ ತಂದುದರಿಂದ ಅವರು ತನಿಖಾ ಸಮಿತಿಯನ್ನು ರಚಿಸಿದ್ದಾರೆ.

  ವೀಡಿಯೋ ವೈರಲ್ ಆಗುತ್ತಲೇ ಸಂಘಪರಿವಾರದ ಕಾರ್ಯಕರ್ತರು, ಪ್ರೊಫೆಸರ್ ಮತ್ತು ಕಾಲೇಜಿನ ವಿರುದ್ಧ ಪ್ರತಿಭಟನೆ ನಡೆಸಿದ್ದರು.

“ಘಟನೆ ನಡೆದ ಸಮಯದಲ್ಲಿ ನಾನು ರಜೆಯಲ್ಲಿದ್ದೆ. ನಾನು ವಾಪಸು ಬಂದ ಕೂಡಲೆ ತನಿಖೆಗೆ ಆದೇಶಿಸಿದ್ದೇನೆ. ನಾನು ತುಂಬ ತುರ್ತಿನಲ್ಲಿದ್ದೆ, ಹಾಗಾಗಿ ಕಾಲೇಜಿನ ತೋಟದಲ್ಲಿ ನಮಾಝು ಮಾಡಿದೆ ಎಂದು ಆ ಪ್ರೊಫೆಸರ್ ಹೇಳಿದ್ದಾರೆ. ಈ ಪ್ರಕರಣದ ಸಮಗ್ರ ಮಗ್ಗುಲನ್ನು ನೋಡಲು ಒಂದು ತನಿಖಾ ಸಮಿತಿ ರಚಿಸಲಾಗಿದೆ. ಆ ಸಮಿತಿ ನೀಡುವ ವರದಿ ಮತ್ತು ಸಲಹೆಯ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದು ಪ್ರಿನ್ಸಿಪಾಲ್ ಎ. ಕೆ. ಗುಪ್ತ ಹೇಳಿದರು.

ತನಿಖಾ ಸಮಿತಿಯು ಇನ್ನು ಒಂದು ವಾರದಲ್ಲಿ ವರದಿ ಸಲ್ಲಿಸಲು ಕೋರಲಾಗಿದೆ ಎಂದು ಶಾಲೆಯ ಆಡಳಿತ ವರ್ಗದವರು ಹೇಳಿದರು. “ತನಿಖಾ ಸಮಿತಿಯು ಪ್ರೊಫೆಸರ್ ರಿಂದ ಕ್ಷಮಾಪಣೆ ಕೇಳುವಂತೆ ಮಾಡಬೇಕೆ? ಎಚ್ಚರಿಕೆ ನೀಡಬೇಕೆ ಎಂಬುದನ್ನು ತೀರ್ಮಾನಿಸಲಿದೆ” ಎಂದೂ ಗುಪ್ತ ಹೇಳಿದರು.

  ಈ ಸಂಬಂಧ ಯಾವುದೇ ಎಫ್ಐಆರ್- ಪ್ರಥಮ ಮಾಹಿತಿ ವರದಿ ಸಲ್ಲಿಕೆಯಾಗಿಲ್ಲ.

Join Whatsapp
Exit mobile version