Home ಟಾಪ್ ಸುದ್ದಿಗಳು ಕ್ರಿಶ್ಚಿಯನ್ನರ ಮೇಲೆ ಕೋಮು ದಾಳಿ| ಧಾರ್ಮಿಕ ಸ್ವಾತಂತ್ರ್ಯಆಯೋಗ ಕಳವಳ

ಕ್ರಿಶ್ಚಿಯನ್ನರ ಮೇಲೆ ಕೋಮು ದಾಳಿ| ಧಾರ್ಮಿಕ ಸ್ವಾತಂತ್ರ್ಯಆಯೋಗ ಕಳವಳ

ಹೊಸದಿಲ್ಲಿ: ಸಂಘಪರಿವಾರ ಸೇರಿದಂತೆ ಹಿಂದುತ್ವ ಗುಂಪುಗಳ ನೇತೃತ್ವದಲ್ಲಿ ಕ್ರಿಶ್ಚಿಯನ್ನರ ಮೇಲೆ ಹಿಂಸಾಚಾರ ನಡೆಯುತ್ತಿದ್ದು, ಉತ್ತರ ಭಾರತದ ಪರಿಸ್ಥಿತಿ ಗಂಭೀರವಾಗಿದೆ ಎಂದು ಧಾರ್ಮಿಕ ಸ್ವಾತಂತ್ರ್ಯ ಆಯೋಗ ಕಳವಳ ವ್ಯಕ್ತಪಡಿಸಿದೆ.
ಈ ತಿಂಗಳ 3ನೇ ತಾರೀಕಿನಂದು ಒಂದೇ ದಿನದಲ್ಲಿ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಕ್ರೈಸ್ತರ ಮೇಲೆ ಕನಿಷ್ಠ 13 ಕೋಮು ದಾಳಿಗಳು ವರದಿಯಾಗಿತ್ತು.


ಪ್ರಾರ್ಥನಾ ಮಂದಿರಗಳ ಮೇಲೆ ಆಕ್ರಮಣ, ಕಾನೂನುಬಾಹಿರ ಬಂಧನ, ಚಿತ್ರಹಿಂಸೆ ಸೇರಿದಂತೆ ಕ್ರಿಶ್ಚಿಯನ್ನರ ಮೇಲೆ ಹಿಂದುತ್ವ ಗುಂಪುಗಳು ಏಕಪಕ್ಷೀಯವಾಗಿ ಕೋಮುವಾದಿ ದಾಳಿಗಳನ್ನು ನಡೆಸುತ್ತಿದೆ ಎಂದು ಆಯೋಗ ತಿಳಿಸಿದೆ.

ಉತ್ತರ ಪ್ರದೇಶ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳು ಜಾರಿಗೆ ತಂದಿರುವ ಮತಾಂತರ ವಿರೋಧಿ ಕಾನೂನುಗಳು ಇಂತಹಾ ಹಿಂಸಾಚಾರಗಳಿಗೆ ಕಾರಣವಾಗಿದೆ.
ಉತ್ತರ ಭಾರತದಲ್ಲಿ ಕ್ರಿಶ್ಚಿಯನ್ನರ ಮೇಲಿನ ಹಿಂಸಾಚಾರವು ಈ ವರ್ಷದ ಜೂನ್ ನಿಂದ ತೀವ್ರಗೊಂಡಿದೆ ಎಂದು ಧಾರ್ಮಿಕ ಸ್ವಾತಂತ್ರ್ಯ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.

Join Whatsapp
Exit mobile version