ಮುಂಬೈ: 70 ದಿನಗಳ ಕಾಲ ಒಟಿಟಿ ವೇದಿಕೆಗಳಾದ ಆಲ್ಟ್ ಬಾಲಾಜಿ ಹಾಗೂ ಎಂಎಕ್ಸ್ ಪ್ಲೇಯರ್ಸ್ ನಲ್ಲಿ ಪ್ರಸಾರ ಕಂಡಿದ್ದ ಏಕ್ತಾ ಕಪೂರ್ ಅವರ ನಿರ್ದೇಶನದಲ್ಲಿ ಬಾಲಿವುಡ್ ನಟಿ ಕಂಗನಾ ರನೌತ್ ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋ ‘ಲಾಕ್ ಅಪ್’ ಮೊದಲ ಸೀಸನ್ ನ ಗ್ರ್ಯಾಂಡ್ ಫಿನಾಲೆಯಲ್ಲಿ ವಿನ್ನರ್ ಆಗಿ ಕಾಮಿಡಿಯನ್ ಮುನವ್ವರ್ ಫಾರೂಕಿ ಜಯಗಳಿಸಿದ್ದಾರೆ.
ಈ ಮೂಲಕ ಮುನವ್ವರ್ ಫಾರೂಕಿ 25 ಲಕ್ಷ ರೂ. ಬಹುಮಾನವನ್ನು ಗೆದ್ದುಕೊಂಡಿದ್ದಾರೆ.
ನಿನ್ನೆ ಸಂಜೆ ನಡೆದ ಫೈನಲ್ ನಲ್ಲಿ ಶೋ ನಿರೂಪಕಿ ಕಂಗನಾ ರನೌಟ್ ಅವರು ವಿಜಯಶಾಲಿ ಹೆಸರು ಘೋಷಿಸಿದರು. ಫಾರೂಕಿ ಜೊತೆ ನಟಿ ಪಾಯಲ್ ರೋಹಟಗಿ ಅವರು ರನ್ನರ್ ಅಪ್ ಆಗಿದ್ದಾರೆ.
ಸ್ಪರ್ಧಿಗಳು ವಿವಿಧ ಆರೋಪಗಳ ಮೇಲೆ ಜೈಲು ಸೇರಿ (ಕಾಲ್ಪನಿಕ) ಜೈಲು ಹಕ್ಕಿಗಳಾಗಿ ಹೇಗೆ ಹೊರ ಜಗತ್ತಿನ ಮನ ಗೆಲ್ಲುತ್ತಾರೆ ಎಂಬುದು ಲಾಕಪ್ ಶೋ ತಿರುಳಾಗಿತ್ತು.
ಮುನವ್ವರ್ ಫಾರೂಕಿ ಅವರು ಕಾರ್ಯಕ್ರಮಕ್ಕೆ ಸಂಘಪರಿವಾರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಮುನವ್ವರ್ ಫಾರೂಕಿ ಶೋಗೆ ನಿಷೇಧ ಹೇರಿತ್ತು.
ಕಾಮಿಡಿಯನ್ ಮುನವ್ವರ್ ಫಾರೂಕಿಗೆ ‘ಲಾಕ್ ಅಪ್’ ವಿನ್ನರ್ ಟ್ರೋಫಿಯ ಜೊತೆಗೆ 25 ಲಕ್ಷ ರೂಪಾಯಿ ಬಹುಮಾನ, ಒಂದು ಕಾರು ಲಭಿಸಿವೆ. ಮೊದಲ ರನ್ನರ್-ಅಪ್ ಆಗಿ ಪಾಯಲ್ ರೋಹಟ್ಗಿ ಹೊರಹೊಮ್ಮಿದ್ದಾರೆ.
ಮುನವ್ವರ್ ಫಾರೂಕಿ, ಪಾಯಲ್ ರೋಹಟ್ಗಿ ಮತ್ತು ಅಂಜಲಿ ಅರೋರಾ ಟಾಪ್ 3 ಸ್ಥಾನಕ್ಕೇರಿದ್ದರು. ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಪ್ರಿನ್ಸ್ ನರುಲಾ, ಮುನವ್ವರ್ ಫಾರೂಕಿ, ಶಿವಂ ಶರ್ಮಾ, ಅಂಜಲಿ ಅರೋರಾ, ಅಜ್ಮಾ ಫಲ್ಲಾ, ಪಾಯಲ್ ರೋಹಟ್ಗಿ ಇದ್ದರು. ಅಂತಿಮವಾಗಿ ಮುನವ್ವರ್ ಫಾರೂಕಿ ಗೆಲುವಿನ ನಗೆ ಬೀರಿದ್ದಾರೆ.