Home ಟಾಪ್ ಸುದ್ದಿಗಳು ಕಲ್ಲಿದ್ದಲು ಗಣಿ ಸ್ಫೋಟ: 25 ಮಂದಿ ಸಾವು, ಹಲವರಿಗೆ ಗಾಯ

ಕಲ್ಲಿದ್ದಲು ಗಣಿ ಸ್ಫೋಟ: 25 ಮಂದಿ ಸಾವು, ಹಲವರಿಗೆ ಗಾಯ

ಅಂಕಾರ: ಕಲ್ಲಿದ್ದಲು ಗಣಿಯಲ್ಲಿ ನಡೆದ ಸ್ಫೋಟದಲ್ಲಿ ಕನಿಷ್ಠ 25 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡ ಘಟನೆ ಉತ್ತರ ಟರ್ಕಿಯ ಬಾರ್ಟಿನ್ ನ ಅಮಸ್ರಾ ಪಟ್ಟಣದಲ್ಲಿ ನಡೆದಿದೆ.

ಸ್ಫೋಟದಲ್ಲಿ 25 ಮಂದಿ ಸಾವನ್ನಪ್ಪಿದ್ದಾರೆ ಎಂದು ಬಾರ್ಟಿನ್ ಗವರ್ನರ್ ಕಚೇರಿ ತಿಳಿಸಿದೆ. ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಂಟು ಮಂದಿ ಸೇರಿದಂತೆ ಕನಿಷ್ಠ 17 ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವ ಫಹ್ರೆಟಿನ್ ಕೋಕಾ ತಿಳಿಸಿದ್ದಾರೆ.

ಕಪ್ಪು ಸಮುದ್ರದ ಕರಾವಳಿ ಪ್ರಾಂತ್ಯದ ಬಾರ್ಟಿನ್’ನಲ್ಲಿರುವ ಅಮಸ್ರಾ ಪಟ್ಟಣದಲ್ಲಿರುವ ಸರ್ಕಾರಿ ಸ್ವಾಮ್ಯದ ಟಿಟಿಕೆ ಅಮಸ್ರಾ ಮುಸ್ಸೆಸ್ ಮುದುರ್ಲುಗು ಗಣಿಯಲ್ಲಿ ಸ್ಫೋಟ ನಡೆದಿದೆ. ಘಟನೆಯಲ್ಲಿ ಸಿಲುಕಿರುವ ಹಲವಾರು ಗಾಯಾಳುಗಳನ್ನು ರಕ್ಷಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಲಿದ್ದಲು ಗಣಿಗಳಲ್ಲಿ ಕಂಡುಬರುವ ಫೆರ್ ಡ್ಯಾಂಪ್ ನಿಂದ ಅನಿಲಗಳ ಸೋರಿಕೆಯಿಂದಾಗಿ ಸ್ಫೋಟ ನಡೆದಿರುವ ಸಾಧ್ಯತೆಯಿದೆ ಎಂದು ಪ್ರಾಥಮಿಕ ತನಿಖೆಯಿಂದ ಮಾಹಿತಿ ಲಭಿಸಿರುವುದಾಗಿ ಇಂಧನ ಸಚಿವ ಫಾತಿಹ್ ಡೊನ್ಮೆಜ್ ತಿಳಿಸಿದ್ದಾರೆ.

ಸ್ಫೋಟದ ವೇಳೆ ಗಣಿಯಲ್ಲಿ 110 ಜನರಿದ್ದರು. ಸ್ಫೋಟದ ಬಳಿಕ ಹೆಚ್ಚಿನ ಕಾರ್ಮಿಕರನ್ನು ಸ್ಥಳಾಂತರಿಸಲು ಸಾಧ್ಯವಾಯಿತು. ಆದರೂ 49 ಮಂದಿ ಅಪಾಯ ಪ್ರದೇಶದಲ್ಲಿ ಸಿಲುಕಿ ಹಾಕಿಕೊಂಡಿದ್ದಾರೆ ಎಂದು ಸಚಿವ ಸುಲೇಮಾನ್ ಸೋಯ್ಲು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

2014 ರಲ್ಲಿ ಪಶ್ಚಿಮ ಟರ್ಕಿಯ ಸೋಮಾ ಪಟ್ಟಣದಲ್ಲಿ ಕಲ್ಲಿದ್ದಲು ಗಣಿಯಲ್ಲಿ ನಡೆದ ಸ್ಫೋಟದಲ್ಲಿ ಒಟ್ಟು 301 ಜನರು ಸಾವನ್ನಪ್ಪಿದ್ದರು.

Join Whatsapp
Exit mobile version