Home ಕರಾವಳಿ ‘ಯಾನ್ ದಾಲ ಮಲ್ತೇ ಇಜ್ಜಿ, ಯಂಕ್ ದಾಲ ಗೊತ್ತೇ ಇಜ್ಜೀ’ ಎಂದ ಬಸ್ ಡ್ರೈವರ್ ಸಯ್ಯದ್...

‘ಯಾನ್ ದಾಲ ಮಲ್ತೇ ಇಜ್ಜಿ, ಯಂಕ್ ದಾಲ ಗೊತ್ತೇ ಇಜ್ಜೀ’ ಎಂದ ಬಸ್ ಡ್ರೈವರ್ ಸಯ್ಯದ್ ಹುಸೇನ್ ಗೆ ಸಿನಿಮಾದಲ್ಲೂ ಅವಕಾಶ

ಮಂಗಳೂರು: ಖಾಸಗಿ ಸುದ್ದಿವಾಹಿನಿಯೊಂದರ ವಾರಂಟ್ ಎಂಬ ಕಾರ್ಯಕ್ರಮದಲ್ಲಿ ಬಳಸುವ ಹಿನ್ನೆಲೆ ಧ್ವನಿಯನ್ನು ಸಯ್ಯದ್ ಹುಸೇನ್ ಎಂಬ ಬಸ್ ಡ್ರೈವರ್ ಅನುಕರಣೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


ಅಜೆಕಾರು ಮೂಲದ ಸಯ್ಯದ್ ಹುಸೇನ್ ಇತ್ತೀಚೆಗೆ ವಾರಂಟ್ ಕಾರ್ಯಕ್ರಮದಲ್ಲಿ ಬಳಸುವ ಹಿನ್ನೆಲೆ ಧ್ವನಿಯನ್ನುಅನುಕರಣೆ ಮಾಡಿ ರಾತ್ರಿ ಬೆಳಗ್ಗೆ ಆಗುವುದರ ಒಳಗಡೆ ವೈರಲ್ ಆಗಿದ್ದರು. ಈಗ ಸಯ್ಯದ್ ಹುಸೇನ್ ಗೆ ಸಿಮಾದಲ್ಲೂ ಅವಕಾಶ ಒದಗಿ ಬಂದಿದ್ದು, ನಿರ್ದೇಶಕರೊಬ್ಬರು ಇವರ ಧ್ವನಿಯನ್ನು ಮೆಚ್ಚಿ ಅವಕಾಶ ನೀಡಿದ್ದಾರೆ ಎಂದು ತಿಳಿದು ಬಂದಿದೆ.


ಈ ಬಗ್ಗೆ ಸಂದರ್ಶನ ಒಂದರಲ್ಲಿ ಮಾತನಾಡಿದ ಅವರು, ಬೆಂಗಳೂರಿನಿಂದ ನಿರ್ದೇಶಕರೊಬ್ಬರು ಕರೆ ಮಾಡಿ 2 ತಿಂಗಳ ಬಳಿಕ ಒಂದು ಸಿನಿಮಾ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಕ್ರೈಂ ಗೆ ಹಿನ್ನೆಲೆ ಧ್ವನಿಯನ್ನು ನೀಡಬೇಕು ಒಂದು ವೀಡಿಯೋ ಮಾಡಿ ಕಳುಹಿಸಿ ಎಂದು ಹೇಳಿದ್ದಾರೆ. ಅಲ್ಲದೆ ಸಿನಿಮಾಗೆ ಹೋಗುವ ಆಸಕ್ತಿ ಇಲ್ಲ ಎಂದು ಹೇಳಿದ್ದಾರೆ.

Join Whatsapp
Exit mobile version