ನವದೆಹಲಿ: ಭಾರತೀಯ ಆಡಳೀಯ ಸೇವಾ (ಐ.ಎ.ಎಸ್) ಕೇಡರ್ ಗಳಿಗೆ ಸಂಬಂಧಿಸಿದ 1954 ರ ನಿಯಮಾವಳಿ ತಿದ್ದುಪಡಿ ವಿರೋಧಿಸಿ ಛತ್ತೀಸ್ ಗಢ ಮುಖಮಂತ್ರಿ ಭೂಪೇಶ್ ಬಾಘೇಲ್, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಶ್ಚಿಮ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಕೇಂದ್ರ ಸಚಿವಾಲಯ ಮತ್ತು ಇಲಾಖೆಯ ಈ ಬದಲಾವಣೆ ಕೇಂದ್ರ ಸರ್ಕಾರಕ್ಕೆ ಅಧಿಕಾರಶಾಹಿಗಳನ್ನು ನೇಮಿಸಲು ಅವಕಾಶ ನೀಡಿದಂತಾಗುತ್ತದೆ ಎಂದು ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ.
ಈ ಮಧ್ಯೆ “ತಿದ್ದುಪಡಿಯು ಸಹಕಾರಿ ಒಕ್ಕೂಟದ ಮನೋಭಾವಕ್ಕೆ ವಿರುದ್ಧವಾಗಿದ್ದು, ರಾಜ್ಯದ ಆಡಳಿತದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ” ಎಂದು ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.