ಬೆಂಗಳೂರು: ರಾಜ್ಯದ ನೂತನ ಸಚಿವ ಸಂಪುಟ ರಚನೆಯಾಗಿದ್ದು, ಸಚಿವರಿಗೆ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿನ ನೆರೆ, ಪ್ರವಾಹ, ಕೊರೋನಾ 3ನೇ ಅಲೆಯ ನಿಯಂತ್ರಣ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ್ದಾರೆ.
ಈ ಕುರಿತಂತೆ ಪಟ್ಟಿಯನ್ನು ಬಿಡುಗಡೆ ಮಾಡಿರುವಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರಾಜ್ಯದಲ್ಲಿ ಕೋವಿಡ್-19 ನಿರ್ವಹಣೆ ಹಾಗೂ ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ಪರಿಶೀಲನೆ ಮಾಡಲು, ಅವರ ಹೆಸರಿನ ಮುಂದೆ ಸೂಚಿಸಿರುವ ಜಿಲ್ಲೆಗಳಿಗೆ, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂಬುದಾಗಿ ತಿಳಿಸಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ಈ ಕೆಳಗಿನಂತಿದೆ…
- ಗೋವಿಂದ ಕಾರಜೋಳ – ಬೆಳಗಾವಿ
- ಕೆ.ಎಸ್.ಈಶ್ವರಪ್ಪ – ಶಿವಮೊಗ್ಗ
- ಆರ್.ಅಶೋಕ್ – ಬೆಂಗಳೂರು ನಗರ
- ಬಿ.ಶ್ರೀರಾಮುಲು – ಚಿತ್ರದುರ್ಗ
- ವಿ.ಸೋಮಣ್ಣ – ರಾಯಚೂರು
- ಉಮೇಶ್ ಕತ್ತಿ – ಬಾಗಲಕೋಟೆ
- ಎಸ್ ಅಂಗಾರ – ದಕ್ಷಿಣ ಕನ್ನಡ
- ಜೆಸಿ ಮಾಧುಸ್ವಾಮಿ – ತುಮಕೂರು
- ಅರಗ ಜ್ಞಾನೇಂದ್ರ – ಚಿಕ್ಕಮಗಳೂರು
- ಡಾ.ಸಿಎನ್.ಅಶ್ವತ್ಥನಾರಾಯಣ – ರಾಮನಗರ
- ಸಿಸಿ ಪಾಟೀಲ್ – ಗದಗ
- ಆನಂದ್ ಸಿಂಗ್ – ವಿಜಯನಗರ ಮತ್ತು ಬಳ್ಳಾರಿ
- ಕೋಟಾ ಶ್ರೀನಿವಾಸ ಪೂಜಾರಿ – ಕೊಡಗು
- ಪ್ರಭು ಚೌಹಾಣ್ – ಬೀದರ್
- ಮರುಗೇಶ್ ನಿರಾಣಿ – ಕಲಬುರ್ಗಿ
- ಶಿವರಾಂ ಹೆಬ್ಬಾರ್ – ಉತ್ತರ ಕನ್ನಡ
- ಎಸ್.ಟಿ.ಸೋಮಶೇಖರ್ – ಮೈಸೂರು ಮತ್ತು ಚಾಮರಾಜನಗರ
- ಬಿ.ಸಿ ಪಾಟೀಲ್ – ಹಾವೇರಿ
- ಬೈರತಿ ಬಸವರಾಜು – ದಾವಣಗೆರೆ
- ಡಾ.ಕೆ.ಸುಧಾಕರ್ – ಚಿಕ್ಕಬಳ್ಳಾಪುರ
- ಕೆ.ಗೋಪಾಲಯ್ಯ – ಹಾಸನ
- ಶಶಿಕಲಾ ಜೊಲ್ಲೆ – ವಿಜಯಪುರ
- MTB ನಾಗರಾಜು – ಬೆಂಗಳೂರು ಗ್ರಾಮಾಂತರ
- ಕೆಸಿ ನಾರಾಯಣ್ ಗೌಡ – ಮಂಡ್ಯ
- ಬಿಸಿ ನಾಗೇಶ್ – ಯಾದಗಿರಿ
- ಸುನೀಲ್ ಕುಮಾರ್ – ಉಡುಪಿ
- ಹಾಲಪ್ಪ ಆಚಾರ್ – ಕೊಪ್ಪಳ
- ಶಂಕರ್ ಪಾಟೀಲ್ ಮುನೇನಕೊಪ್ಪ – ಧಾರವಾಡ
- ವಿ.ಮುನಿರತ್ನ – ಕೋಲಾರ