Home ಜಾಲತಾಣದಿಂದ ಲುಲುಮಾಲ್ ಮಾಲಕರ ಹೆಸರು ಮರೆಮಾಚಿ ಟ್ವೀಟ್ ಮಾಡಿದ ಸಿಎಂ | ಬೊಮ್ಮಾಯಿಗೆ ಭಕ್ತರ ಭಯವೇ ಎಂದು...

ಲುಲುಮಾಲ್ ಮಾಲಕರ ಹೆಸರು ಮರೆಮಾಚಿ ಟ್ವೀಟ್ ಮಾಡಿದ ಸಿಎಂ | ಬೊಮ್ಮಾಯಿಗೆ ಭಕ್ತರ ಭಯವೇ ಎಂದು ಪ್ರಶ್ನಿಸಿದ ನೆಟ್ಟಿಗರು

ಬೆಂಗಳೂರು; ಖ್ಯಾತ ಉದ್ಯಮಿ, ದಾನಿ ಎಂ.ಎ ಯೂಸುಫ್ ಅಲಿ ಅವರ ಮಾಲಕತ್ವದ ಲುಲು ಗ್ರೂಪ್ ನಿನ್ನೆ ರಾಜ್ಯದಲ್ಲಿ ಬರೊಬ್ಬರಿ 2000 ಕೋಟಿ ಹೂಡಿಕೆಗೆ ಒಪ್ಪಿಗೆ ನೀಡಿದ್ದು, ಹಲವು ವಲಯಗಳ ಹೂಡಿಕೆಗೆ ಲುಲು  ಗ್ರೂಪ್ ಮುಂದಾಗಿದೆ. ಆದರೆ ಇದೀಗ ಕರ್ನಾಟಕ ಮುಖ್ಯಮಂತ್ರಿ ಬೊಮ್ಮಾಯಿ ಅವರ ಅಧಿಕೃತ ಖಾತೆಯ ಪೋಸ್ಟಿನಲ್ಲಿ ಯೂಸುಫ್ ಅಲಿಯ ಹೆಸರನ್ನು ಮರೆಮಾಚಿ ಬೇರೊಂದು ವ್ಯಕ್ತಿಯ ಹೆಸರನ್ನು ಉಲ್ಲೇಖ ಮಾಡಿದ್ದು ನೆಟ್ಟಿಗರನ್ನು ಕೆಣಕಿದ್ದು  ಹೂಡಿಕೆ ಮಾಡಿದ ವ್ಯಕ್ತಿ ಮುಸ್ಲಿಂ ಎಂಬ ಕಾರಣಕ್ಕೆ ಅವರ ಹೆಸರು ಬಹಿರಂಗಪಡಿಸಲು ಸಿಎಂ ಗೆ ಯಾಕೆ ಅಂಜಿಕೆ ಎಂದು ಪ್ರಶ್ನಿಸಿದ್ದಾರೆ.

ಸ್ವಿಝರ್ಲಾಂಡಿನ ದಾವೋಸ್ ನ ವಲ್ಡ್ ಎಕಾನಮಿಕಲ್  ಫೋರಂ ನಲ್ಲಿ ಲುಲು ‌ಗ್ರೂಪ್ ಜೊತೆಗಿನ ಒಪ್ಪಂದದ ಬಗ್ಗೆ ಮಾಹಿತಿ ನೀಡುವ ಪೋಸ್ಟ್ ನಲ್ಲಿ‌ ಕಂಪೆನಿಯ ಮಾಲಕ ಯೂಸುಫ್ ಅಲಿ ಜೊತೆ ಮಾತುಕತೆಯ ಪೋಟೋ ಇದ್ದರೂ ಯುಸುಫ್ ಅಲಿ ಹೆಸರು ಹಾಕದೆ ಕೇವಲ ಅವರ ಕಂಪೆನಿಯ ನಿರ್ದೇಶಕ ಎ.ವಿ.ಅನಂತ್ ರಾಮನ್ ಹೆಸರು ಹಾಕಿದ್ದಾರೆ‌.ಇದು ನೆಟ್ಟಿಗರ ವ್ಯಾಪಕ ಟೀಕೆಗೆ ಕಾರಣವಾಗಿದೆ. ಸಿಎಂಗೆ ಯೂಸುಫ್ ಅಲಿಯ ಹೆಸರು ಹಾಕಲು ಯಾಕಿಷ್ಟು ಭಯ ? ಭಕ್ತರು ಅಲ್ಲೂ ಧರ್ಮ ದಂಗಲ್ ಮಾಡುತ್ತಾರೆ ಎಂಬ ಭಯವೇ ಎಂದೆಲ್ಲಾ ಕೇಳಿದ್ದು ಮತ್ತೇ ಬೊಮ್ಮಾಯಿ ಮುಜುಗರಕ್ಕೀಡಾಗಿದ್ದಾರೆ.

ಯೂಸುಫ್ ಅಲಿಯ ಹೆಸರ ಬದಲಿಗೆ ಅನಂತ್ ರಾಮನ್ ಹೆಸರು ಹಾಕಿ ಬೊಮ್ಮಾಯಿ ಭಕ್ತರನ್ನು ತೃಪ್ತಿಪಡಿಸಲು ಹೊರಟ ಬಗೆಯನ್ನು ಪ್ರಶ್ನಿಸಿ ಈಗ ಧರ್ಮ ರಕ್ಷಕರು  ದಂಗಲ್ ಹೆಸರಲ್ಲಿ ಹೂಡಿಕೆ ತಡೆಯೋದಿಲ್ವೇ ಎಂದು ಪ್ರಶ್ನಿಸಿದ್ದಾರೆ.

Join Whatsapp
Exit mobile version