Home ಟಾಪ್ ಸುದ್ದಿಗಳು ಬಿಜೆಪಿ ಆಡಳಿತದಲ್ಲಿ ಸರ್ವಾಧಿಕಾರಿ ಹಿಟ್ಲರ್ ಆಳ್ವಿಕೆಗಿಂತಲೂ ಹೀನಾಯ ಸ್ಥಿತಿ: ಮಮತಾ ಬ್ಯಾನರ್ಜಿ

ಬಿಜೆಪಿ ಆಡಳಿತದಲ್ಲಿ ಸರ್ವಾಧಿಕಾರಿ ಹಿಟ್ಲರ್ ಆಳ್ವಿಕೆಗಿಂತಲೂ ಹೀನಾಯ ಸ್ಥಿತಿ: ಮಮತಾ ಬ್ಯಾನರ್ಜಿ

ಕೋಲ್ಕತ್ತ: ಬಿಜೆಪಿ ಆಡಳಿತದಲ್ಲಿ ಸರ್ವಾಧಿಕಾರಿಗಳಾದ ಅಡಾಲ್ಫ್ ಹಿಟ್ಲರ್, ಜೋಸೆಫ್ ಸ್ಟಾಲಿನ್, ಬೆನಿಟೊ ಮುಸ್ಸೊಲಿನಿ ಆಳ್ವಿಕೆಗಿಂತಲೂ ಹೀನಾಯ ಸ್ಥಿತಿ ನಿರ್ಮಾಣವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.


ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದ ರಕ್ಷಣೆಯಾಗಬೇಕಿದ್ದರೆ ಕೇಂದ್ರದ ಸಂಸ್ಥೆಗಳಿಗೆ ಸ್ವಾಯತ್ತೆ ನೀಡಬೇಕು ಎಂದು ಪ್ರತಿಪಾದಿಸಿದ್ದಾರೆ.ಕೇಂದ್ರ ಸಂಸ್ಥೆಗಳಿಗೆ ಕೆಲಸ ಮಾಡಲಾಗುತ್ತಿಲ್ಲ. ಯಾಕೆಂದರೆ ಅವುಗಳಿಗೆ ಸ್ವಾಯತ್ತೆ ಇಲ್ಲ. ಸ್ವಾಯತ್ತೆ ಎಂಬುದು ಇಬ್ಬರು ವ್ಯಕ್ತಿಗಳು ಹಾಗೂ ಬಿಜೆಪಿ ಕೈಯಲ್ಲಿದೆ. ಅಡಾಲ್ಫ್ ಹಿಟ್ಲರ್, ಜೋಸೆಫ್ ಸ್ಟಾಲಿನ್, ಬೆನಿಟೊ ಮುಸ್ಸೊಲಿನಿ ಅವರಂಥ ಸರ್ವಾಧಿಕಾರಿಗಳ ಆಡಳಿತದ ಸಂದರ್ಭದಲ್ಲೇ ಈ ಮಟ್ಟದ ರಾಜಕೀಯ ಹಸ್ತಕ್ಷೇಪ ಇರಲಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version