Home ಟಾಪ್ ಸುದ್ದಿಗಳು ಮಹಿಳೆಯ ಅಳಲಿಗೆ ಸ್ಪಂದಿಸದ ಮುಖ್ಯಮಂತ್ರಿ: ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದ ಕಾಂಗ್ರೆಸ್

ಮಹಿಳೆಯ ಅಳಲಿಗೆ ಸ್ಪಂದಿಸದ ಮುಖ್ಯಮಂತ್ರಿ: ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದ ಕಾಂಗ್ರೆಸ್

ಬೆಂಗಳೂರು: ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ವೇಳೆ ಮಹಿಳೆಯೊಬ್ಬರು ಅಳುವನ್ನು ಸಿಎಂ ಬೊಮ್ಮಾಯಿ ಕೇಳಿಸಿದರೂ ಕೇಳಿಸದಂತೆ ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.

ಈ ಬಗ್ಗೆ ಟ್ವೀಟರ್ ನಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕಾಮನ್ ಮ್ಯಾನ್ ಸಿಎಂ ಎಂದು ಕರೆದುಕೊಳ್ಳುವುದಕ್ಕಿಂತ ಕಾಮನ್ ಸೆನ್ಸ್ ಇಲ್ಲದ ಸಿಎಂ ಎಂದರೆ ಸೂಕ್ತ ಎಂದು ಟೀಕಿಸಿದೆ.
ಮುಖ್ಯಮಂತ್ರಿ ಹುದ್ದೆ ಎಂದರೆ ದರ್ಪ, ದೌಲತ್ತು, ಅಹಂಕಾರ ಪ್ರದರ್ಶಿಸುವ ಹುದ್ದೆಯಲ್ಲ. ಜನರ ನೋವು ಆಲಿಸಿ, ಪರಿಹರಿಸುವ ಜನಸೇವೆಯ ಶ್ರೇಷ್ಠ ಸ್ಥಾನ ಎಂದು ಹೇಳಿದೆ.

Join Whatsapp
Exit mobile version