ಬೆಂಗಳೂರು: ಹಾಲಿ ಸರ್ಕಾರದ ಕೊನೆಯ ಬಜೆಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ (ಫೆ.17ಕ್ಕೆ) ಮಂಡಿಸಲಿದ್ದಾರೆ.
ಇದು ಬೊಮ್ಮಾಯಿ ಮಂಡಿಸುವ 2ನೇ ಬಜೆಟ್ ಆಗಿದೆ.
ನಾಳೆ ಬೆಳಗ್ಗೆ 10.15ಕ್ಕೆ 2023-24ನೇ ಸಾಲಿನ ಬಜೆಟ್ ಮಂಡನೆಯಾಗಲಿದ್ದು, ಈಗಾಗಲೇ ಅಧಿಕಾರಿಗಳ ಜೊತೆ ಬಜೆಟ್ ಪೂರ್ವತಯಾರಿ ಸಭೆಗಳನ್ನು ಸಿಎಂ ಬೊಮ್ಮಾಯಿ ನಡೆಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಅನುಕೂಲವಾಗುವಂತೆ ಜನಪ್ರಿಯ ಘೋಷಣೆಗಳೊಂದಿಗೆ ಬಜೆಟ್ ಮಂಡಿಸುವುದು ಬಹುತೇಕ ಖಚಿತವಾಗಿದೆ.