Home ಟಾಪ್ ಸುದ್ದಿಗಳು ಜೂನ್ 3,4ರಂದು ರಾಮಕೃಷ್ಣ ಮಠದ ಅಮೃತ ಮಹೋತ್ಸವ: ಸಿಎಂ ಬೊಮ್ಮಾಯಿ ಭಾಗಿ

ಜೂನ್ 3,4ರಂದು ರಾಮಕೃಷ್ಣ ಮಠದ ಅಮೃತ ಮಹೋತ್ಸವ: ಸಿಎಂ ಬೊಮ್ಮಾಯಿ ಭಾಗಿ

ಬೆಂಗಳೂರು: ಇದೀಗ ರಾಮಕೃಷ್ಣ ಮಠಕ್ಕೆ ಇದೇ ಜೂನ್ 3 ರಂದು 75 ಸಂವತ್ಸರಗಳು ಪರಿಪೂರ್ಣವಾಗುತ್ತಿವೆ. ಈ ಸಂದರ್ಭದಲ್ಲಿ ಜೂನ್ 3 ಮತ್ತು 4 ರಂದು ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವಾಮಿ ಏಕಗಮ್ಯಾನಂದಜಿ  ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮೃತ ಮಹೋತ್ಸವದ ಪ್ರಯುಕ್ತ ಆನೇಕ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ, 3 ರಂದು ಬೆಳಿಗ್ಗೆ 6-30ಕ್ಕೆ ವಿಶೇಷ ಪೂಜೆ, ಹೋಮಹವನ, ಬೆಳಿಗ್ಗೆ 8-15 ಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಶ್ರೀಮತ್ ಸ್ವಾಮಿ ಗೌತಮಾನಂದಜಿ ಮಹರಾಜ್ ದಿವ್ಯ ಸಾನಿಧ್ಯದಲ್ಲಿ ಸಾಧು ಭಕ್ತರ ಶೋಭಾಯಾತ್ರೆ ಮಠದ ವರೆಗೆ ನಡೆಯಲಿದೆ. ಬಳಿಕ 9-15 ಕ್ಕೆ ,ಶ್ರೀ ಶ್ರೀಮಠದ ನೂತನ ಮಹಾದ್ವಾರದ ಲೋಕಾರ್ಪಣ ಕಾರ್ಯಕ್ರಮ ಜರುಗಲಿದೆ. ಬೆಳಿಗ್ಗೆ 9-30ಕ್ಕೆ  ಅಮೃತ ಸದನ –  ಸ್ವಾಮಿ ವೀರೇಶ್ವರಾನಂದ ಸಾಧು ನಿವಾಸದ ಉದ್ಘಾಟನೆಯಾಗಲಿದೆ ಎಂದರು.

 9.45ಕ್ಕೆ ಅಮೃತ ಭವನ ವಿವೇಕಾನಂದ  ತರಬೇತಿ ಕೇಂದ್ರದ ಕಟ್ಟಡಕ್ಕೆ ಭೂಮಿಪೂಜೆ ಹಾಗೂ ಅಡಿಗಲ್ಲು ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯ ಭೂಮಿಭೂಜೆಯಲ್ಲಿ ಭಾಗಿಯಾಗಿ ಅಡಿಗಲ್ಲು ಹಾಕಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ದಯಾನಂದ ಪೈ ಭಾಗಿಯಾಗುವರು ಎಂದು ಮಾಹಿತಿ ನೀಡಿದರು.

ಜೂನ್ 3 ರಂದು ಪೂರ್ವಾಹ್ನ 10 ಗಂಟೆಗೆ ಅಮೃತ ಮಹೋತ್ಸವದ ಹಾಗೂ ‘ಆಮೃತ ಸಂಗಮ’ ಎಂಬ ಎರಡು ದಿನಗಳ ರಾಜ್ಯಮಟ್ಟದ ಸಾಧು ಭಕ್ತ ಸಮ್ಮೇಳನ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸ್ವಾಮಿ ಗೌತಮಾನಂದಜಿ ಮಹರಾಜ್ ದಿವ್ಯ ಸಾನಿಧ್ಯದಲ್ಲಿ   ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ  ಅಮೃತ ಮಹೋತ್ಸವವನ್ನು ಉದ್ಘಾಟಿಸಲಿದ್ದಾರೆ. ಸ್ವಾಮಿ ಮುಕ್ತಿದಾನಂದಜಿ ವಿಶ್ವಸ್ಥರು ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ಬೇಲೂರು ಮಠ, ಪಶ್ಚಿಮ ಬಂಗಾಳ ಹಾಗೂ ಸ್ವಾಮಿ ಜೀತಕಾಮನಂದಜಿ ಅಧ್ಯಕ್ಷರು ರಾಮಕೃಷ್ಣ ಮಠ ಮಂಗಳೂರು ಇವರ ದಿವ್ಯ ಉಪಸ್ಥಿತಿಯಿರಲಿದೆ ಎಂದರು.

ಡಾ. ಎಸ್. ವಿನಯ್ ಹೆಗ್ಡೆ, ಮನಸಾ ಮಹಾಪರ ಪ್ರೇಮಾನಂದ ಶೆಟ್ಟಿ ಭಾಗಿಯಾಗಲಿದ್ದಾರೆ. ಮುಖ್ಯ ಅಭ್ಯಾಗತರಾಗಿ ಸಂಸದ ನಳೀನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ್ ಕಾಮತ್, ಮಂಜುನಾಥ್ ಭಂಡಾರಿ ಪೂರ್ವ ಶಾಸಕರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಿ ಆರ್ ಪಾಟೀಲ್, ಮುಖ್ಯ ಪೋಸ್ಟ ಮಾಸ್ಟರ್ ಜನರಲ್ ಎನ್. ರಾಜೇಂದ್ರ ಕುಮಾರ್, ಉದ್ಯಮಿಯಾದ ದಯಾನಂದ ಪೈ ಭಾಗಿಯಾಗಲಿದ್ದಾರೆ.

ಮಂಗಳೂರಿನ ರಾಮಕೃಷ್ಣ ಮಠದ ಅಮೃತ ಮಹೋತ್ಸವದ ಪ್ರಯುಕ್ತ ಅಂಚೆ ಇಲಾಖೆ ವಿಶೇಷ ಅಂಚೆ ಲಕೋಟೆಯನ್ನು ಹೊರತಂದಿದೆ, ಅದನ್ನು ಜೂನ್ 3ರಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎನ್. ರಾಜೇಂದ್ರ ಕುಮಾರ್ ಶ್ರೀಮಠಕ್ಕೆ ಹಸ್ತಾಂತರಿಸಲಿದ್ದಾರೆ. ಮಠದ ನೂತನ ಸಾಕ್ಷಚಿತ್ರವನ್ನು ಡಾ. ಎನ್ ವಿನಯ ಹೆಗ್ಡೆ ಬಿಡುಗಡೆ ಮಾಡಲಿದ್ದಾರೆ. ಸ್ವಾಮಿ ಮುಕ್ತಿದಾನಂದಜಿ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮಠದ ನೂತನ ವೆಬ್ಸೈಟ್ ನ್ನು ನಳಿನ ಕುಮಾರ್ ಕಟೀಲು ಲೋಕಾರ್ಪಣೆ ಮಾಡಲಿದ್ದಾರೆ ಎಂದು ಅವರು ತಿಳಿಸಿದರು.

ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳ ರಾಮಕೃಷ್ಣ ಮಠದ ಸುಮಾರು 75 ಸನ್ಯಾಸಿಗಳು ಹಾಗೂ ಸುಮಾರು ರಾಜ್ಯದ ಬೇರೆ ಬೇರೆ ಭಾಗದಿಂದ ಭಕ್ತರು ಈ ಸಮ್ಮೇಳನದಲ್ಲಿ ಭಾಗಿಯಾಗಲಿದ್ದಾರೆ. ಅಮೃತ ಸಂಗಮ ಚಿಂತನ ಮಂಥನ ಕಾರ್ಯಕ್ರಮದಲ್ಲಿ 6 ಗೋಷ್ಠಿಗಳಿದ್ದು, ಸುಮಾರು 18 ಸ್ವಾಮಿಜಿಗಳಾದಿಯಾಗಿ ವಿದ್ವಾಂಸರು ಸರಳತೆಯ ಪರಿಕಲ್ಪನೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ ಎಂದು ಅವರು ತಿಳಿಸಿದರು.

ಹೆಚ್ಚಿನ ವಿವರಗಳಿಗಾಗಿ ಸ್ವಾಮಿ ಏಕಗಮ್ಯಾನಂದ (9448353162 ) ಅವರನ್ನು ಸಂಪರ್ಕಿಸಬಹುದು.

Join Whatsapp
Exit mobile version