Home ಟಾಪ್ ಸುದ್ದಿಗಳು ದೇವಾಲಯದ ಪೌರೋಹಿತ್ಯಕ್ಕಾಗಿ ಅರ್ಚಕರ ನಡುವೆ ಮಾರಾಮಾರಿ

ದೇವಾಲಯದ ಪೌರೋಹಿತ್ಯಕ್ಕಾಗಿ ಅರ್ಚಕರ ನಡುವೆ ಮಾರಾಮಾರಿ

ಚಿಕ್ಕಬಳ್ಳಾಪುರ: ದೇವಾಲಯದ ಪೌರೋಹಿತ್ಯಕ್ಕಾಗಿ ಎರಡು ಅರ್ಚಕರ ಗುಂಪಿನ ನಡುವೆ ಮಾರಾಮಾರಿ ನಡೆದಿದ್ದು, ಹಳೇ ಪುರೋಹಿತರನ್ನು ವಜಾಗೊಳಿಸಿ ಹೊಸ ಪುರೋಹಿತರಿಗೆ ಅಧಿಕಾರ ಹಸ್ತಾಂತರಿಸಲು ಮುಂದಾಗಿದ್ದಕ್ಕೆ ದೇವಾಲಯದ ಆವರಣದಲ್ಲಿ ಘರ್ಷಣೆ ಉಂಟಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಇತಿಹಾಸ ಪ್ರಸಿದ್ಧ ಆಲಂಬಗಿರಿ ಗ್ರಾಮದ ಶ್ರೀವೆಂಕರವಣಸ್ವಾಮಿ ದೇವಸ್ಥಾನದ ಪೌರೋಹಿತ್ಯಕ್ಕಾಗಿ ಗಲಾಟೆ ನಡೆದಿದ್ದು, ಉದ್ವಿಘ್ನ ಸ್ಥಿತಿ  ನಿರ್ಮಾಣವಾಗಿದೆ.

ದೇವಾಲಯದ ಪೌರೋಹಿತ್ಯದ ಘರ್ಷಣೆ ತಾರಕಕ್ಕೇರಿದ್ದು ಎರಡು ಅರ್ಚಕರ ತಂಡವೂ ನ್ಯಾಯಾಲಯದ ಮೆಟ್ಟಿಲೇರಿತ್ತು. ಹೊಸ ಪುರೋಹಿತರಿಗೆ ಅಧಿಕಾರ ವಹಿಸುವಂತೆ ಹೈಕೋರ್ಟ್ ಆದೇಶ ನೀಡಿತ್ತು. ಆದೇಶದಂತೆ ಪೌರೋಹಿತ್ಯ ಹಸ್ತಾಂತರಕ್ಕೆ ತಹಶೀಲ್ದಾರ್ ಮುನಿಸ್ವಾಮಿ ಮುಂದಾಗಿದ್ದರು. ಆದರೆ ಹಳೇ ಪುರೋಹಿತರ ಪರ ಗುಂಪು ತಹಶೀಲ್ದಾರ್ ನಡೆಗೆ ವಿರೋಧ ವ್ಯಕ್ತಪಡಿಸಿದ್ದು, ಘರ್ಷಣೆ ಉಂಟಾದ್ದರಿಂದ ಸ್ಥಳಕ್ಕೆ ಪೊಲೀಸರು ಧಾವಿಸಿದ್ದಾರೆ.

ಇದೀಗ ದೇವಸ್ಥಾನದ ಸುತ್ತಮುತ್ತ ಬಿಗುವಿನ ವಾತಾವರಣ ಉಂಟಾಗಿದೆ.

Join Whatsapp
Exit mobile version