Home ಜಾಲತಾಣದಿಂದ ನೋಯ್ಡಾದ್ದೆಂದು ಬೀಜಿಂಗ್ ವಿಮಾನ ನಿಲ್ದಾಣದ ಫೋಟೋ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆದ ಬಿಜೆಪಿ...

ನೋಯ್ಡಾದ್ದೆಂದು ಬೀಜಿಂಗ್ ವಿಮಾನ ನಿಲ್ದಾಣದ ಫೋಟೋ : ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆದ ಬಿಜೆಪಿ ನಾಯಕರು !

►ಚೀನಾ ಸರಕಾರಿ ಪತ್ರಕರ್ತನಿಂದ ಟ್ವಿಟ್ಟರಿನಲ್ಲಿ ವ್ಯಂಗ್ಯ !

ಬೀಜಿಂಗ್: ಭಾರತೀಯ ಸರ್ಕಾರಿ ಅಧಿಕಾರಿಗಳು ಬೀಜಿಂಗ್ ನ ಡಾಕ್ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫೋಟೋವನ್ನು ತೋರಿಸಿ ಭಾರತದ ಮೂಲಸೌಕರ್ಯದ ಅಭಿವೃದ್ಧಿ ಎಂಬಂತೆ ಬಿಂಬಿಸುತ್ತಿರುವುದು ದುರಂತ ಎಂದು ಚೈನಾ ಪತ್ರಕರ್ತ ಶೆನ್ ಶಿವೇ ವ್ಯಂಗ್ಯವಾಡಿದ್ದಾರೆ.  ಶೆನ್ ಶಿವೇ  ಚೀನಾದ ಸರಕಾರಿ ಮಾಧ್ಯಮ ಮೂಲದವರಾಗಿದ್ದಾರೆ. ಆ ಮೂಲಕ ಅವರ ಟ್ವೀಟನ್ನು ಚೀನಾದ ಅಧಿಕೃತ ಟ್ವೀಟ್ ಎಂದೇ ಪರಿಗಣಿಸಬಹುದಾಗಿದೆ. ಆ ಮೂಲಕ ಬಿಜೆಪಿ ನಾಯಕರು ತಮ್ಮ ಸುಳ್ಳು ಮತ್ತು ನಕಲಿ ಸುದ್ದಿಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮಾನ ಕಳೆದಿದ್ದಾರೆ.

ಈ ಕುರಿತು ತನ್ನ ಟ್ವಿಟ್ಟರ್ ಖಾತೆಯ ಮೂಲಕ ಪ್ರತಿಕ್ರಿಯಿಸಿದ ಚೈನಾ ಮೂಲದ ಪತ್ರಕರ್ತರಾದ ಶೆನ್ ಶಿವೈ, ಭಾರತದ ಮೂಲಸೌಕರ್ಯ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ ಎಂದು ಪ್ರಚಾರ ಪಡಿಸುವ ಭರದಲ್ಲಿ ಚೀನಾದ ಬೀಜಿಂಗ್ ಡಾಕ್ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಫೋಟೋಗಳನ್ನು ಬಳಸಿರುವುದು ನಾಚಿಕೆಗೇಡಿನ ಸಂಗತಿ ಮತ್ತು ಆಘಾತ ತಂದಿದೆ ಎಂದು ತಿಳಿಸಿದ್ದಾರೆ.

ಸದ್ಯ ಭಾರತದ ಮೂಲಸೌಕರ್ಯವು ಅತ್ಯುತ್ತಮ ದರ್ಜೆಯಲ್ಲಿದೆ ಎಂದು ಬಿಂಬಿಸಲು ಭಾರತದ ಅಧಿಕಾರಿಗಳು ಚೈನಾದ ಬೀಜಿಂಗ್ ವಿಮಾನ ನಿಲ್ದಾಣದ ಫೋಟೋ ಬಳಸಿರುವುದಕ್ಕೆ ನೆಟ್ಟಿಗರು ವ್ಯಾಪಕ ಆಕ್ರೋಶ ಮತ್ತು ಖಂಡನೆಯನ್ನು ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version