Home ಟಾಪ್ ಸುದ್ದಿಗಳು ಸೆಕೆಂಡ್‌ನಲ್ಲಿ 150 ಸಿನಿಮಾಗಳಷ್ಟು ಡೌನ್‌ಲೋಡ್ ಸಾಮರ್ಥ್ಯದ ಇಂಟರ್‌ನೆಟ್ ಲೋಕಾರ್ಪಣೆಗೊಳಿಸಿದ ಚೀನಾ

ಸೆಕೆಂಡ್‌ನಲ್ಲಿ 150 ಸಿನಿಮಾಗಳಷ್ಟು ಡೌನ್‌ಲೋಡ್ ಸಾಮರ್ಥ್ಯದ ಇಂಟರ್‌ನೆಟ್ ಲೋಕಾರ್ಪಣೆಗೊಳಿಸಿದ ಚೀನಾ

ಚೀನಾ: ಒಂದು ಸೆಕೆಂಡ್‌ನಲ್ಲಿ 150 ಸಿನಿಮಾಗಳಷ್ಟು ವೀಡಿಯೋವನ್ನು ಡೌನ್ ಲೋಡ್ ಮಾಡಬಹುದಾದ ವಿಶ್ವದ ಅತ್ಯಂತ ವೇಗದ ಇಂಟರ್‌ನೆಟ್ ಅನ್ನು ಚೀನಾ ಅಭಿವೃದ್ಧಿಪಡಿಸಿದೆ. ಪ್ರಸ್ತುತ ವಿಶ್ವದಲ್ಲಿರುವ ಅತ್ಯಂತ ವೇಗದ ಇಂಟರ್‌ನೆಟ್‌ಗಳಿಗೆ ಹೋಲಿಸಿದರೆ 10 ಪಟ್ಟು ಹೆಚ್ಚು ವೇಗದ್ದಾಗಿದೆ.

ತ್ಸಿಗುವಾ ವಿಶ್ವವಿದ್ಯಾಲಯ, ಚೀನಾ ಮೊಬೈಲ್ ಹಾಗೂ ಹುವಾಯಿ ಟೆಕ್ನಾಲಜಿಸ್ ಮತ್ತು ಕರೆಂಟ್ ಕಾರ್ಪೊರೇಷನ್ ಜಂಟಿಯಾಗಿ ಈ ಅತೀ ವೇಗದ ಇಂಟರ್ ನೆಟ್ ಅಭಿವೃದ್ದಿ ಪಡಿಸಿವೆ. ಬೀಜಿಂಗ್, ವುಹಾನ್ ಮತ್ತು ಗ್ವಾಂಗ್‌ಜು ನಡುವಿನ 3000 ಕಿ.ಮೀ. ದೂರದವರೆಗೂ ಇಂಟರ್ ನೆಟ್ ಜಾಲ ಇದೆ.

ಇತ್ತೀಚೆಗಷ್ಟೇ ಅಮೆರಿಕ 5ನೇ ತಲೆಮಾರಿನ ಇಂಟರ್ ನೆಟ್ ಅಭಿವೃದ್ಧಿಪಡಿಸಿತ್ತು. ಇದು ಸೆಕೆಂಡ್‌ಗೆ 400 ಗೀಗಾಬೈಟ್ ಡೌನ್ ಲೋಡ್ ಆಗುತ್ತದೆ. ಆದರೆ ಈಗ ಚೀನಾ ಅಭಿವೃದ್ಧಿಪಡಿಸಿದ ಇಂಟರ್‌ನೆಟ್ 1.2 ಅಂದರೆ ಸುಮಾರು 1200 ಗೀಗಾ ಬೈಟ್ ಡೌನ್ ಲೋಡ್ ಆಗುತ್ತದೆ.

Join Whatsapp
Exit mobile version