Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಬಿಡುವಿಲ್ಲದ ಮಳೆ; ಕುಸಿದು ಬಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಮನೆ

ಚಿಕ್ಕಮಗಳೂರು: ಬಿಡುವಿಲ್ಲದ ಮಳೆ; ಕುಸಿದು ಬಿದ್ದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಮನೆ

ಚಿಕ್ಕಮಗಳೂರು: ಸತತ ಮಳೆಯಿಂದಾಗಿ ಮಲ್ಲೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ಮನೆ ಕುಸಿದು ಬಿದ್ದ ಘಟನೆ ಕಡೂರಿನಲ್ಲಿ ನಡೆದಿದೆ.


ಮಚ್ಚೇರಿ ಗ್ರಾಮದಲ್ಲಿರುವ ಶಾರದಮ್ಮ ಅವರ ಮನೆಯ ಹಿಂಭಾಗ ಭಾನುವಾರ ರಾತ್ರಿ ಕುಸಿದು ಬಿದ್ದಿದ್ದು, ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.


ಮೇಲ್ಭಾಗದಿಂದ ಬರುವ ನೀರು ಸರಿಯಾಗಿ ಗ್ರಾಮದ ಹೊರಕ್ಕೆ ಹೋಗಲು ವ್ಯವಸ್ಥೆಯಿಲ್ಲದೆ, ಆ ನೀರೆಲ್ಲ ತಗ್ಗಿನಲ್ಲಿರುವ ಉಪಾಧ್ಯಕ್ಷರ ಮನೆಯ ಜಾಗಕ್ಕೆ ಬಂದು ನಿಲ್ಲುತ್ತದೆ.


ಇಬ್ಬರು ಹೆಣ್ಣು ಮಕ್ಕಳು ಇದ್ದು, ಓದಲು, ಮಲಗಲೂ ಸಾಧ್ಯವಾಗುತ್ತಿಲ್ಲ. ಅನಿವಾರ್ಯವಾಗಿ ಪಕ್ಕದ ಸಮುದಾಯ ಭವನದಲ್ಲಿದ್ದೇವೆ. ಮನೆಯ ತಳದಲ್ಲಿ ನೀರು ಉಕ್ಕುತ್ತಿದ್ದು, ಐದು ವರ್ಷಗಳಿಂದ ಇದೇ ಸಮಸ್ಯೆಯಾಗಿದೆ. ಇದರತ್ತ ಯಾರೂ ಗಮನ ಹರಿಸುತ್ತಿಲ್ಲ ಎಂದು ಶಾರದಮ್ಮ ಪತಿ ಮಂಜುನಾಥ್ ಅಳಲು ತೋಡಿಕೊಂಡರು.


ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ತಹಶೀಲ್ದಾರ್ ಜೆ.ಉಮೇಶ್, ಸರ್ಕಾರದ ನಿಯಮಾನುಸಾರ ನೀಡಬಹುದಾದ ತಾತ್ಕಾಲಿಕ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

Join Whatsapp
Exit mobile version