Home ಟಾಪ್ ಸುದ್ದಿಗಳು ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ: ಆರೋಪ ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ನಿಂದ ಪರಾರಿಯಾದ ಉತ್ತರ ಪ್ರದೇಶ ಸಚಿವ

ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣ: ಆರೋಪ ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ನಿಂದ ಪರಾರಿಯಾದ ಉತ್ತರ ಪ್ರದೇಶ ಸಚಿವ

ಕಾನ್ಪುರ: ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಉತ್ತರ ಪ್ರದೇಶದ ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳು ಹಾಗೂ ಖಾದಿ ಇಲಾಖೆಗಳ ಸಚಿವರಾಗಿರುವ ರಾಕೇಶ್ ಸಚನ್ ತಪ್ಪಿತಸ್ಥರು ಎಂದು ಸಾಬೀತಾಗುತ್ತಿದ್ದಂತೆಯೇ ಕೋರ್ಟ್ ನಿಂದ ಪರಾರಿಯಾಗಿದ್ದಾರೆ.


ರಾಕೇಶ್ ಸಚನ್ ಅವರು 1991ರ ಪ್ರಕರಣದಲ್ಲಿ ತಪ್ಪಿತಸ್ಥ ಎನ್ನುವುದು ಸಾಬೀತಾಗಿದೆ. ಕಾನ್ಪುರ ನ್ಯಾಯಾಲಯವು ರಾಕೇಶ್ ಅವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡುತ್ತಿದ್ದಂತೆಯೇ ಅವರು ಕೋರ್ಟ್ ನಿಂದ ಪಲಾಯನ ಮಾಡಿದ್ದಾರೆ.
ಕೋರ್ಟ್ ನ ಅಧಿಕಾರಿಗಳ ಕಡೆಯಿಂದ ಶನಿವಾರ ರಾತ್ರಿ ದೂರು ಸ್ವೀಕರಿಸಲಾಗಿದೆ ಎಂದು ಕಾನ್ಪುರ ಪೊಲೀಸರು ಖಚಿತಪಡಿಸಿದ್ದಾರೆ.

ಈ ಆರೋಪವನ್ನು ತಳ್ಳಿಹಾಕಿರುವ ರಾಕೇಶ್ ಸಚನ್, ಪಲಾಯನ ಮಾಡಿರುವುದು ವದಂತಿ. ಕೆಲವು ಪ್ರಕರಣಗಳು ಬಾಕಿ ಇವೆ. ಕೆಲವು ವಿಷಯಗಳನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ. ಕೋರ್ಟ್ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

Join Whatsapp
Exit mobile version