Home ಟಾಪ್ ಸುದ್ದಿಗಳು ಚಿಕ್ಕಮಗಳೂರು: ಕರ್ತವ್ಯ ಲೋಪ ಹಿನ್ನೆಲೆ; ಅರಣ್ಯಾಧಿಕಾರಿ ಅಮಾನತು

ಚಿಕ್ಕಮಗಳೂರು: ಕರ್ತವ್ಯ ಲೋಪ ಹಿನ್ನೆಲೆ; ಅರಣ್ಯಾಧಿಕಾರಿ ಅಮಾನತು

ಚಿಕ್ಕಮಗಳೂರು: ಕರ್ತವ್ಯ ಲೋಪದಡಿ ಕೊಪ್ಪ ವಿಭಾಗದ ಕಳಸ ವಲಯದ ಉಪ ವಲಯ ಅರಣ್ಯಾಧಿಕಾರಿ (ಡಿಆರ್‌ಎಫ್‌ಒ) ಮತ್ತು ಮೋಜಣಿದಾರ ಕೆ.ನಾಗರಾಜ ಅವರನ್ನು ಅಮಾನುತಗೊಳಿಸಿ ಅರಣ್ಯ ಸಂರಕ್ಷಣಾಧಿಕಾರಿ ಎಂ.ಸಿ. ಸಿದ್ರಾಮಪ್ಪ ಅವರು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.


ಸಂಸೆಯ ಸರ್ವೆನಂಬರ್‌ 265 ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಜಿಸಿಬಿಯಿಂದ ಮಣ್ಣು ಸಾಗಾಣಿಕೆ, ಮಾವಿನಕೆರೆಯ ಸರ್ವೆ ನಂಬರ್‌ 641ರ ಸೆಕ್ಷನ್‌–4 ಅರಣ್ಯ ಪ್ರದೇಶದಲ್ಲಿ ಕಾಂಕ್ರಿಟ್‌ ರಸ್ತೆ ನಿರ್ಮಾಣ, ಕಳಸ ವಲಯ ಕಚೇರಿಯ ಗೋದಾಮಿನಲ್ಲಿದ್ದ 197 ಕೆ.ಜಿ. ಶ್ರೀಗಂಧದ ತುಂಡುಗಳ ಕಳವು, ಶ್ರೀಗಂಧ ದಾಸ್ತಾನಿನಲ್ಲಿದ್ದ 336 ಕೆ.ಜಿ ಶ್ರೀಗಂಧ ಕಡಿಮೆ ಇರುವ ಬಗ್ಗೆ ವರದಿ ನೀಡಿರುವುದು, ಕಳಸ ವಲಯದ ಅರಣ್ಯ ತಕ್ಷೀರು ಅಪರಾಧಿಗೆ ಜಾಮೀನು ಸಿಗಲು ಎಫ್ಐಆರ್‌ ನಲ್ಲಿ ಬಿಳಿ ಶಾಯಿ ಹಾಕಿ ಆ ಜಾಗದಲ್ಲಿ ‘ರಡಿಯಲ್ಲಿ’ ಎಂದು ನಮೂದಿಸಿರುವ ಲೋಪಗಳು ಮೇಲ್ನೋಟಕ್ಕೆ ಕಂಡುಬಂದಿವೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.


ಕಳಕೋಡು ಗ್ರಾಮದ ಸರ್ವೆ ನಂಬರ್‌ 80ರ ಅಧಿಸೂಚಿತ ಪ್ರದೇಶಕ್ಕೆ ಹೊಂದಿಕೊಂಡಿರುವ ಒತ್ತುವರಿ ಪ್ರದೇಶದಲ್ಲಿ ಕಾಡುಜಾತಿ ಮರಗಳ ಹನನ, ಯಡೂರು ಗ್ರಾಮದ ಸರ್ವೆ ನಂಬರ್‌ 50ರಲ್ಲಿ 2011–12ನೇ ಸಾಲಿನ ಅಕೇಶಿಯಾ ನೆಡುತೋಪಿನಲ್ಲಿ 116 ಅಕೇಶಿಯಾ ಮರಗಳ ಅಕ್ರಮ ಹನನ, ಮಾವಿನಕೆರೆಯ ಸರ್ವೆ ನಂಬರ್‌ 945ರಲ್ಲಿ ಸಾಮಾಜಿಕ ಅರಣ್ಯ ಇಲಾಖೆಯಿಂದ ಬೆಳೆಸಿರುವ ನೆಡುತೋಪಿನಲ್ಲಿ 29 ಗಾಳಿ ಮರಗಳ ಹನನ ಮುಂತಾದ ಹಲವು ಲೋಪಗಳ ಬಗ್ಗೆ ಆದೇಶದಲ್ಲಿ ತಿಳಿಸಲಾಗಿದೆ.

Join Whatsapp
Exit mobile version