Home ಟಾಪ್ ಸುದ್ದಿಗಳು ಛತ್ತೀಸ್ ಗಡ: ಮಹಿಳೆ ಸೇರಿದಂತೆ ಮೂವರು ನಕ್ಸಲರ ಹತ್ಯೆ

ಛತ್ತೀಸ್ ಗಡ: ಮಹಿಳೆ ಸೇರಿದಂತೆ ಮೂವರು ನಕ್ಸಲರ ಹತ್ಯೆ

ಛತ್ತೀಸ್ ಗಡ: ನಕ್ಸಲರು ಮತ್ತು ಭದ್ರತಾ ಪಡೆ ನಡುವಿನ ಗುಂಡಿನ ದಾಳಿಯಲ್ಲಿ ಮಹಿಳೆ ಸೇರಿದಂತೆ ಮೂವರು ನಕ್ಸಲರನ್ನು ಭದ್ರತಾ ಪಡೆ ಹತ್ಯೆಗೈದ ಘಟನೆ ಛತ್ತೀಸಗಡದ ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.


ಮಿರ್‌ತುರ್‌ ಪೊಲೀಸ್‌ ಠಾಣಾ ವ್ಯಾಪ್ತಿಯ ಪೊಮ್ರಾ ಅರಣ್ಯ ಪ್ರದೇಶದಲ್ಲಿ ಶನಿವಾರ ಬೆಳಿಗ್ಗೆ ಸುಮಾರು 7.30ಕ್ಕೆ ನಕ್ಸಲರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಕಾಳಗ ನಡೆದಿದೆ ಎಂದು ಐಜಿಪಿ ಸುಂದರ್‌ ರಾಜ್‌ ಪಿ. ತಿಳಿಸಿದರು. ಕಾರ್ಯಾಚರಣೆ ಮುಗಿದ ಬಳಿಕ ಘಟನಾ ಸ್ಥಳದಲ್ಲಿ ಓರ್ವ ಮಹಿಳೆ ಸೇರಿದಂತೆ ಮೂವರು ನಕ್ಸಲರ ಮೃತದೇಹಗಳು ಸಿಕ್ಕಿವೆ. ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದೆ ಎಂದು ಸುಂದರ್‌ ರಾಜ್‌ ಹೇಳಿದರು.

Join Whatsapp
Exit mobile version