Home ಟಾಪ್ ಸುದ್ದಿಗಳು ರಾಜೀವ್ ಗಾಂಧಿ ತಂದ ಮಹಿಳಾ ಮೀಸಲಾತಿಯಿಂದ ಇಂದಿರಾ ಗಾಂಧಿ ಪ್ರಧಾನಿಯಾದರು: ಗೀತಾ ಶಿವರಾಜ್ ಕುಮಾರ್ ಭಾಷಣ...

ರಾಜೀವ್ ಗಾಂಧಿ ತಂದ ಮಹಿಳಾ ಮೀಸಲಾತಿಯಿಂದ ಇಂದಿರಾ ಗಾಂಧಿ ಪ್ರಧಾನಿಯಾದರು: ಗೀತಾ ಶಿವರಾಜ್ ಕುಮಾರ್ ಭಾಷಣ ಸಖತ್ ಟ್ರೋಲ್

ಬೆಂಗಳೂರು: ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳೆರಡರಲ್ಲೂ ಶೇ.33 ರಷ್ಟು ಸ್ಥಾನಗಳ ಮೀಸಲಾತಿಯನ್ನು ರಾಜೀವ್ ಗಾಂಧಿ ಜಾರಿಗೆ ತಂದ ಮೇಲೆಯೇ ಇಂದಿರಾ ಗಾಂಧಿ ಪ್ರಧಾನಿಯಾದರು, ಮಾಯಾವತಿ, ಜಯಲಲಿತಾ ಸಿಎಂ ಆದರು ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ ಎನ್ನಲಾದ ಭಾಷಣವೊಂದು ಸಖತ್ ಟ್ರೋಲ್ ಆಗ್ತಿದೆ.

ಸಾಮಾನ್ಯವಾಗಿ ಪಂಚಾಯತ್ ಎಲೆಕ್ಷನ್ ಆಗಲಿ ಪುರುಷರಿಗೆ ಜಾಸ್ತಿ ಪ್ರಾತಿನಿಧ್ಯ ಸಿಗ್ತಿತ್ತು. ನಮ್ಮ ರಾಜೀವ್ ಗಾಂಧಿಯವ್ರು ಪ್ರೈಮ್ ಮಿನಿಸ್ಟರ್ ಆಗಿದ್ದರು. ಅವ್ರು ನಮ್ಮ ಮಹಿಳೆಯರೆಲ್ಲ ಸಮಾನವಾಗಿ ಇರಬೇಕು ಅಂತ 33.3 ಪರ್ಸೆಂಟ್ ಮೀಸಲಾತಿಯನ್ನು ತಂದರು, ಅದಕ್ಕಿಂತ ಮೊದಲು ಮೀಸಲಾತಿ ಅಂತ ನಮ್ಮ ಹೆಣ್ಣು ಮಕ್ಕಳಿಗೆ ಇರಲಿಲ್ಲ, ಪಂಚಾಯತ್‌ನಲ್ಲೇ ಮೀಸಲಾತಿ ಇರಲಿಲ್ಲ ಅಂದ್ರೆ ವಿಧಾನಸಭೆಯಲ್ಲಿ ಮಹಿಳೆಯರು ಬರೋದು ಹೇಗೆ ಅಂತ ಮೀಸಲಾತಿ ತಂದರು ಎಂದು ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.

ಈ ಮಹಿಳಾ ಮೀಸಲಾತಿ ಅನುಷ್ಠಾನ ಮಾಡಿದರು. ಇದು ಆಗಿದ್ದು 1992ರಲ್ಲಿ ಅಂತ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ. ಇದಾದ ಮೇಲೆ ನಮ್ಮ ಹೆಣ್ಣು ಮಕ್ಕಳು ಎಲ್ಲಿಂದ ಎಲ್ಲಿಗೋ ರೀಚ್ ಆದರು. ಬಹಳ ಧೈರ್ಯ, ಶಕ್ತಿವಂತರು ನಮ್ಮ ಹೆಣ್ಣು ಮಕ್ಕಳು ಅಂತ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ.

ಈ ಮೀಸಲಾತಿ ಬಂದ ಮೇಲೆಯೇ ಇಂದಿರಾ ಗಾಂಧಿ ದೇಶದ ಪ್ರಧಾನಿಯಾದರು ಅಂತ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ. ಅಲ್ಲದೇ ಮಾಯಾವತಿ, ಜಯಲಲಿತಾ ಅಂತವರು ಸಿಎಂ ಆದರು ಅಂತಲೂ ಗೀತಾ ಶಿವರಾಜ್‌ಕುಮಾರ್ ಹೇಳಿದ್ದಾರೆ ಎಂದು ಗೀತಾ ಅವರ ಈ ಭಾಷಣ ವೈರಲ್ ಆಗಿದ್ದು, ಸಖತ್ ಟ್ರೋಲ್ ಮಾಡಲಾಗುತ್ತಿದೆ.

Join Whatsapp
Exit mobile version