Home ಟಾಪ್ ಸುದ್ದಿಗಳು ಛತ್ತೀಸ್ ಗಢ: ಕಾರಿಗೆ ಡಿಕ್ಕಿ ಹೊಡೆದ ಪಿಕಪ್, 10 ಮಂದಿ ಸಾವು

ಛತ್ತೀಸ್ ಗಢ: ಕಾರಿಗೆ ಡಿಕ್ಕಿ ಹೊಡೆದ ಪಿಕಪ್, 10 ಮಂದಿ ಸಾವು

ಬೆಮೆತಾರಾ: ಛತ್ತೀಸ್ ಗಢದ ಬೆಮೆತಾರಾದಲ್ಲಿ ಹೆದ್ದಾರಿಯಲ್ಲಿ ನಿಂತಿದ್ದ ಕಾರಿಗೆ ಪಿಕಪ್ ಡಿಕ್ಕಿ ಹೊಡೆದ ಪರಿಣಾಮ 3 ಮಕ್ಕಳು ಸೇರಿದಂತೆ 10 ಮಂದಿ ಸಾವನ್ನಪ್ಪಿದ್ದಾರೆ. 23 ಮಂದಿಗೆ ಗಾಯಗಳಾಗಿದ್ದು, ಅವರಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ರಾಯ್ ಪುರ ಏಮ್ಸ್ ಗೆ ದಾಖಲಿಸಲಾಗಿದೆ.

ಕುಟುಂಬದ ಕಾರ್ಯಕ್ರಮದ ನಿಮಿತ್ತ ಹಲವು ಮಂದಿ ಟ್ರಕ್ ನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ.
ಮೃತರು ಪಥರಾ ಗ್ರಾಮದವರಾಗಿದ್ದು, ತಿರೈಯಾ ಗ್ರಾಮದಲ್ಲಿ ಕುಟುಂಬದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಹಿಂತಿರುಗುತ್ತಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಆಗಮಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Join Whatsapp
Exit mobile version