Home ಟಾಪ್ ಸುದ್ದಿಗಳು ಚಾಮರಾಜನಗರ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

ಚಾಮರಾಜನಗರ: ಇಂಡಿಗನತ್ತದಲ್ಲಿ ಮರು ಮತದಾನ ಆರಂಭ

ಚಾಮರಾಜನಗರ: ಇದೇ 26ರಂದು ಲೋಕಸಭಾ ಚುನಾವಣೆಯ ಮತದಾನದ ದಿನ ಘರ್ಷಣೆ ನಡೆದಿದ್ದ ಹನೂರು ತಾಲ್ಲೂಕಿನ ಇಂಡಿಗನತ್ತ ಗ್ರಾಮದಲ್ಲಿ ಮರು ಮತದಾನ ಆರಂಭವಾಗಿದೆ.

ಮತಗಟ್ಟೆ ಹಾಗೂ ಗ್ರಾಮದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಇಂಡಿನಗತ್ತ ಮತ್ತು ಮೆಂದಾರೆ ಗ್ರಾಮಗಳ ಮತದಾರರು ಈ ಮತಗಟ್ಟೆ ವ್ಯಾಪ್ತಿಗೆ ಬರುತ್ತಿದ್ದು, ಒಟ್ಟು 528 ಮತದಾರರಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು, ಈವರೆಗೆ ಮೆಂದಾರೆ ಗ್ರಾಮದ 54 ಮಂದಿ ಹಾಗೂ ಇಂಡಿಗನತ್ತ ಗ್ರಾಮದ ಒಬ್ಬರು ಹಕ್ಕು ಚಲಾಯಿಸಿದ್ದಾರೆ.

Join Whatsapp
Exit mobile version