ಮಸ್ಕಿ: ತಾಲೂಕಿನ ಉಕ್ಕಿ ಹಾಳ ಮತ್ತು ದಿಗ್ಗನಾಯಕನಭಾವಿ ನಡುವೆ ಸಂಪರ್ಕ ಕಲ್ಪಿಸಲು ನಿರ್ಮಿಸುತ್ತಿರುವ ಚೆಕ್ ಕಾಮಗಾರಿ ಯನ್ನು ಸ್ಥಗಿತಗೊಳಿಸಿ ಬಿಲ್ ಅನ್ನು ತಡೆ ಹಿಡಿಯಬೇಕೆಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯಿಂದ ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಂಡಿದ್ದಾರೆ.
ಕೃಷ್ಣಜಲ ಭಾಗ್ಯ ನಿಗಮದಿಂದ ಚೆಕ್ ಡ್ಯಾಂ ನಿರ್ಮಿಸಲು ಸುಮಾರು 2 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಆದರೆ ಚೆಕ್ ಡ್ಯಾಂ ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ನಿರ್ಮಿಸುತ್ತಿರುವುದರಿ೦ದ ಕೂಡಲೇ ಕಾಮಗಾರಿಯನ್ನು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸ್ಥಗಿತಗೊಳಿಸಿ ಬಿಲ್ ಅನ್ನು ತಡೆ ಹಿಡಿಯಬೇಕೆಂದು ಆಗ್ರಹಿಸಿದರು. ಗುತ್ತಿಗೆದಾರರು ಮತ್ತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಮಿಲಾಗಿ ಸರಕಾರದ ಕೋಟ್ಯಂತರ ಹಣವನ್ನು ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲೂಕು ಅಧ್ಯಕ್ಷ ಸಿದ್ದಪ್ಪ ಹೂವಿನಭಾವಿ, ವಿಜಯಕುಮಾರ ಕಾಟಗಲ್, ಪರಶು ರಾಮ ಉಸ್ಕಿಹಾಳ, ಆನಂದ ಉಕ್ಕಿಹಾಳ, ಚಂದ್ರಪ್ಪಗೌಡ ಮುದಬಾಳ, ಭೀಮರಾಯಪ್ಪ ಬಳಗಾನೂರು, ಮರಿಸ್ವಾಮಿ ಬೆನಕನಾಳ, ಕಾಸಿಂ ಮುರಾರಿ ಸೇರಿದಂತೆ ಇನ್ನಿತರರು ಇದ್ದರು.