Home ಟಾಪ್ ಸುದ್ದಿಗಳು ರಷ್ಯಾ ಆಕ್ರಮಣಕ್ಕೆ ಉಕ್ರೇನ್’ನಲ್ಲಿ 2 ಸಾವಿರ ನಾಗರಿಕರ ಸಾವು: ಒಂದು ಮಿಲಿಯನ್ ಜನರು ಪಲಾಯನ

ರಷ್ಯಾ ಆಕ್ರಮಣಕ್ಕೆ ಉಕ್ರೇನ್’ನಲ್ಲಿ 2 ಸಾವಿರ ನಾಗರಿಕರ ಸಾವು: ಒಂದು ಮಿಲಿಯನ್ ಜನರು ಪಲಾಯನ

ಕೀವ್: ಕಳೆದ ವಾರ ಉಕ್ರೇನ್ ಮೇಲೆ ಆಕ್ರಮಣ ಪ್ರಾರಂಭವಾದ ನಂತರ ರಷ್ಯಾ ತನ್ನ ಸೈನಿಕರ ಸಾವುನೋವುಗಳನ್ನು ಮೊದಲ ಬಾರಿಗೆ ವರದಿ ಮಾಡಿದೆ. ಸುಮಾರು 500 ಸೈನಿಕರು ಕೊಲ್ಲಲ್ಪಟ್ಟಿದ್ದಾರೆ ಮತ್ತು 1,600 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದೆ. ಉಕ್ರೇನ್ ತನಗಾದ ಮಿಲಿಟರಿ ನಷ್ಟದ ಬಗ್ಗೆ ಬಹಿರಂಗಪಡಿಸಲಿಲ್ಲ. ಆದರೆ 2,000ಕ್ಕೂ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

ಒಂದು ವಾರದಲ್ಲಿ ಒಂದು ಮಿಲಿಯನ್ ಜನರು ಉಕ್ರೇನ್‌ ನಿಂದ ಪಲಾಯನ ಮಾಡಿದ್ದಾರೆ ಎಂದು ಯುಎನ್ ನಿರಾಶ್ರಿತರ ಏಜೆನ್ಸಿ ವರದಿ ಮಾಡಿದ್ದು, ಈ ಶತಮಾನದಲ್ಲಿ ಇಷ್ಟು ವೇಗದಲ್ಲಿ ಜನರ ಪಲಾಯನದ ಯಾವುದೇ ಘಟನೆಗಳು ನಡೆದಿಲ್ಲ ಎಂದು ಅದು ತಿಳಿಸಿದೆ.

ರಷ್ಯಾ ಪಡೆಗಳು ಖೆರ್ಸನ್ ಪ್ರದೇಶವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ರಷ್ಯಾ ಹೇಳಿಕೊಂಡಿದೆ. ಆದರೆ, ಇದು ಆಕ್ರಮಣಕ್ಕೆ ತುತ್ತಾಗದ ಅತಿದೊಡ್ಡ ನಗರವಾಗಿದೆ ಎಂದು ಅಮೆರಿಕದ ಹಿರಿಯ ರಕ್ಷಣಾ ಅಧಿಕಾರಿಯೊಬ್ಬರು ಇದನ್ನು ವಿವರಿಸಿದ್ದಾರೆ. ಇನ್ನೂ ಹೋರಾಟ ಮುಂದುವರಿದಿರುವುದರಿಂದ ಖೆರ್ಸನ್ ನ ಪರಿಸ್ಥಿತಿ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಕಚೇರಿ ತಿಳಿಸಿದೆ.

Join Whatsapp
Exit mobile version